

ಉತ್ತರ: ಮೃತ ಹಿಂದೂ ಪುರುಷನ ಆಸ್ತಿಯಲ್ಲಿ ಅವರ ಎಲ್ಲ ಮಕ್ಕಳಿಗೂ ಸಮಪಾಲು ಇರುತ್ತದೆ. ಮಕ್ಕಳಲ್ಲಿ ಯಾರಾದರೂ ತೀರಿಹೋಗಿದ್ದರೆ, ಅಂತಹ ಮಕ್ಕಳ ಭಾಗ, ಆ ಮಕ್ಕಳ ವಾರಸುದಾರರಿಗೆ ಸಮವಾಗಿ ಸಲ್ಲುತ್ತದೆ. ಹೀಗಾಗಿ ನೀವು ನಿಮ್ಮ ಅಕ್ಕನ ಮಕ್ಕಳಿಗೆ ಭಾಗ ಕೊಡಬೇಕಾಗುತ್ತದೆ. ಅವರು ಒಪ್ಪಿದರೆ ರಾಜೀ ಮಾಡಿಕೊಂಡು ಹೆಚ್ಚೂ ಕಡಿಮೆ ತೆಗೆದುಕೊಳ್ಳುವುದು ಒಳ್ಳೆಯದು.