ಯಾರಲ್ಲಿ.. ಎಲ್ರೂ ಬರ್ರಪ್ಪಾ.. ಯಾವ್‌ ಪಕ್ಷ ಆದ್ರೇನು... ಎಲ್ಲರೂ ನಮ್ಮವ್ರೇ.. ಬನ್ನಿ ಫೋಟೋಗೆ ಎಂದು ಮನಗೆದ್ದ ಸಿ.ಟಿ.ರವಿ

CTRavi
Published on

ಚಿಕ್ಕಮಗಳೂರು: ಯಾರಲ್ಲಿ.... ಎಲ್ರೂ ಬರ್ರಪ್ಪಾ... ಎಲ್ಲರೂ ನಮ್ಮವ್ರೇ... ಯಾರ್‌ ಗೆದ್ರೆ ಏನಂತೆ? ಬನ್ನಿ ಫೋಟೋ ತೆಗಿಸಿಕೊಳ್ಳೋಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಎಲ್ಲಾ ಪಕ್ಷದವರನ್ನೂ ಕರೆದ ಘಟನೆ ಚಿಕ್ಕಮಗಳೂರಿನಲ್ಲಿ ನಡೆಯಿತು.

ನಗರಸಭೆ ಚುನಾವಣೆ ವೇಳೆ ಪತ್ನಿ ಸಹಿತ ಆಗಮಿಸಿದ್ದ ರವಿ ಅವರು, ಹೀಗೆ ಹೇಳುವ ಮೂಲಕ ಬಿಜೆಪಿ-ಕಾಂಗ್ರೆಸ್-ಪಕ್ಷೇತರ ಅಭ್ಯರ್ಥಿಗಳ ಜೊ ನಿಂತು ಫೋಟೋ ತೆಗೆಸಿಕೊಂಡರು. ಫೋಟೋ ಈಗ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಗರದ ಐ.ಜಿ.ರಸ್ತೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಬೂತ್‍ಗೆ ಬಸವನಹಳ್ಳಿಯಲ್ಲಿರುವ ಮನೆಯಿಂದ ಸಿ.ಟಿ.ರವಿ ದಂಪತಿ ಕಾಲ್ನಡಿಗೆಯಲ್ಲಿ ಬಂದು ಫೋಟೋ ಕ್ಲಿಕ್ಕಿಸಿಕೊಂಡರು. ಈ ಸಂದರ್ಭದಲ್ಲಿ ಎಲ್ಲಾ ಪಕ್ಷದವರನ್ನೂ ಅವರು ಕರೆದರು. ಪಕ್ಷ ಬೇರೆ ಇರ್ಬೋದು. ಯಾರು ಗೆದ್ದರೆ ಏನಂತೆ, ಎಲ್ಲರೂ ನಮ್ಮವರೇ. ಎಲೆಕ್ಷನ್ ಬೇರೆ, ಪಕ್ಷ ಬೇರೆ. ಯಾರೇ ಗೆಲ್ಲಲಿ, ಯಾರೇ ಸೋಲಲಿ. ಯಾರು ಸೋತು-ಗೆದ್ದರೂ ನಮ್ಮವರೇ ಎಂದು ಹೇಳುವುದರೊಂದಿಗೆ ಎಲ್ಲರ ಮನ ಗೆದ್ದರು.

ಸಿ.ಟಿ ರವಿಯವರು ಬರುತ್ತಿದ್ದಂತೆಯೇ ಅವರ ಜತೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಲು ಜನಸಾಗರವೇ ಹರಿದುಬಂತು. ಆಗ ಅವರು ಎಲ್ಲರನ್ನೂ ಕರೆದು ಫೋಟೋ ತೆಗೆಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net