ಕ್ರಿಕೆಟ್‌ ಪಂದ್ಯಾವಳಿ ವೇಳೆ ಆಡುತ್ತಲೇ ಪ್ರಾಣಬಿಟ್ಟ ಕ್ರಿಕೆಟಿಗ- ವಿಡಿಯೋದಲ್ಲಿ ದಾಖಲಾಯ್ತು ಸಾವಿನ ದೃಶ್ಯ

cricket
Published on

ಪುಣೆ: ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಿದ್ದ ಸಂದರ್ಭದಲ್ಲಿ ಕ್ರಿಕೆಟ್‌ ಪಿಚ್‌ನಲ್ಲಿಯೇ ಆಟಗಾರನೊಬ್ಬ ಮೃತಪಟ್ಟಿರುವ ಘಟನೆ ಪುಣೆಯ ಜುನ್ನಾರ್‌ ತಾಲೂಕಿನ ಜಾಧವವಾಡಿ ಗ್ರಾಮದಲ್ಲಿ ನಡೆದಿದೆ.

Babu-nalavade

47 ವರ್ಷದ ಬಾಬು ನಲ್ವಾಡೆ ಎಂಬುವವರು ಮೃತಪಟ್ಟಿದ್ದಾರೆ. ಸ್ಥಳೀಯ ನಿವಾಸಿಗಳು ಕ್ರಿಕೆಟ್ ಪಂದ್ಯ ಆಯೋಜಿಸಿದ್ದರು. ಇದರಲ್ಲಿ ಬಾಬು ಭಾಗವಹಿಸಿದ್ದರು. ಆಟವಾಡುತ್ತಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಬು ಅವರು ನಾನ್ ಸ್ಟ್ರೈಕರ್‌ನ ತುದಿಯಲ್ಲಿ ನಿಂತಿದ್ದರು. ಆಗ ಏಕಾಏಕಿಯಾಗಿ ಕುಸಿದು ಬಿದಿದ್ದಾರೆ. ಇದರ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಯಿಂದ ಅವರಿಗೆ ಹೃದಯಾಘಾತವಾಗಿದೆ ಎಂದು ದೃಢಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net