

ಬಂದಾ (ಉತ್ತರ ಪ್ರದೇಶ): ಕ್ರಿಕೆಟ್ ಆಟವಾಡುತ್ತಿದ್ದ ಮಕ್ಕಳು ಜಗಳ ಮಾಡಿಕೊಳ್ಳುತ್ತಿರುವುದನ್ನು ಸಹಿಸದ ವ್ಯಕ್ತಿಯೊಬ್ಬ, ಅಲ್ಲಿಯೇ ಆಟ ನೋಡುತ್ತಾ ನಿಂತಿದ್ದ ಮಹಿಳೆಯರ ಮೇಲೆ ಆ್ಯಸಿಡ್ ಸುರಿದಿರುವ ವಿಕೃತ ಘಟನೆ ಉತ್ತರ ಪ್ರದೇಶದ ಬಂದಾಜಿ ಲ್ಲೆಯ ಕೈಲಾಶಪುರಿಯಲ್ಲಿ ನಡೆದಿದೆ.
ಓರ್ವ ಯುವತಿ ಮತ್ತು ಇಬ್ಬರು ಮಹಿಳೆಯರ ಮೇಲೆ 60 ವರ್ಷದ ವೃದ್ಧ ಅಶುತೋಶ್ ತ್ರಿಪಾಠಿ ಅಲಿಯಾಸ್ ಗುಲ್ಲಿ ಆ್ಯಸಿಡ್ ದಾಳಿ ನಡೆಸಿದ್ದಾನೆ. ಈತನ ಮನೆಯ ಮುಂದೆ ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಇದನ್ನು ಅಲ್ಲಿದ್ದ ಮಹಿಳೆಯರೂ ನೋಡುತ್ತಿದ್ದರು.
ಹೀಗೆ ಆಡುವಾಗ ಸಹಜ ಎಂಬಂತೆ ಮಕ್ಕಳು ಕಿತ್ತಾಡಿಕೊಂಡಿದ್ದಾರೆ. ಇದರಿಂದ ತ್ರಿಪಾಠಿಗೆ ಕಿರಿಕಿರಯಾಗಿದೆ. ಮಕ್ಕಳು ಕಿತ್ತಾಡಿಗೊಳ್ಳುತ್ತಿದ್ದರೂ ಅಲ್ಲಿದ್ದ ಮಹಿಳೆಯರು ಅವರನ್ನು ಸುಮ್ಮನಿರಿಸಲಿಲ್ಲ ಎಂಬ ಸಿಟ್ಟಿಗೋ ಏನೋ, ಮನೆಯೊಳಗಿದ್ದ ಆ್ಯಸಿಡ್ ತಂದು ಅವರ ಮೇಲೆ ಎರೆಚಿದ್ದಾನೆ. ಈತನ ಈ ಕೃತ್ಯಕ್ಕೆ ರಾಣಿ ಸಿಂಗ್, ಲಕ್ಷ್ಮೀ ಸಿಂಗ್, ಶೋಭಾಸಿಂಗ್ ಎಂಬ ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀರು ತನಿಖೆ ನಡೆಸುತ್ತಿದ್ದಾರೆ.