ವಿಚ್ಛೇದನದ ಪ್ರಕರಣ ಬಾಕಿ ಇರುವಾಗಲೇ ಗಂಡ ತೀರಿಕೊಂಡರು- ಅವರ ಆಸ್ತಿ ನನಗೆ ಸಿಗುವುದಿಲ್ಲವೆ?

nyayadevate
Published on
ನಾನು ಮತ್ತು ನಮ್ಮ ಯಜಮಾನರು ಇಬ್ಬರೂ ಸೇರಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಕೇಸು ಹಾಕಿದ್ದೆವು. ನಮ್ಮ ಯಜಮಾನರು ಕಳೆದ ತಿಂಗಳು ತೀರಿಕೊಂಡರು. ಕೇಸು ಮುಂದುವರೆಯುವುದಿಲ್ಲ ಎನ್ನುತ್ತಿದ್ದಾರೆ. ನನಗೆ ವಿಚ್ಛೇದನ ಇಲ್ಲದೇ ಇರುವುದರಿಂದ ನನ್ನ ಗಂಡನ ಆಸ್ತಿಯಲ್ಲಿ ಪಾಲು ಸಿಗುತ್ತದೆಯೇ? ನಮ್ಮ ಅತ್ತೆ ಮನೆಯವರು ನಾವಿಬ್ಬರೂ ವಿಚ್ಛೇದನಕ್ಕೆ ಕೇಸು ಹಾಕಿದ್ದರಿಂದ ನನಗೇನೂ ಕೊಡುವುದಿಲ್ಲ ಎನ್ನುತ್ತಿದ್ದಾರೆ. ನನ್ನ ಗಂಡನ ಆಸ್ತಿಯಲ್ಲಿ ನನಗೆ ಪಾಲು ಇದೆಯೇ ತಿಳಿಸಿ.

ಉತ್ತರ: ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು , ಪ್ರಕರಣ ದಾಖಲಿಸಲು ಮತ್ತು ಪ್ರಕರಣದಲ್ಲಿ ಆದೇಶ ಕೊಡುವ ದಿನ ಪತಿ ಪತ್ನಿಯರು ಇಬ್ಬರೂ ಇರಲೇಬೇಕು. ನಿಮ್ಮ ಪತಿ ತೀರಿಕೊಂಡ ಮೇಲೆ ವಿಚ್ಛೇದನದ ಪ್ರಕರಣ ನಿಲ್ಲುವುದಿಲ್ಲ. ನಿಮ್ಮ ಪತಿಯ ವಿಧವೆಯಾಗಿ, ನಿಮ್ಮ ಪತಿಯ ಆಸ್ತಿಯಲ್ಲಿ ನಿಮಗೂ, ಅವರ ತಾಯಿಗೂ ಸಮಪಾಲು ಇರುತ್ತದೆ. ನೀವು ವಿಭಾಗಕ್ಕಾಗಿ ಕೇಸು ಹಾಕಿ. ನಿಮ್ಮ ಭಾಗ ಸಿಕ್ಕೇ ಸಿಗುತ್ತದೆ.

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ
https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net