ನಾನು ಬದುಕಲಿ ಎಂದು ಪ್ಲೀಸ್​ ಪ್ರಾರ್ಥಿಸಿ ಎನ್ನುತ್ತಲೇ ಕೊನೆಯುಸಿರೆಳೆದ ನಟಿ ದಿವ್ಯಾ

divya
Published on

ಮುಂಬೈ: ಕರೊನಾ ಸೋಂಕು ತಗುಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿಂದಿ ಕಿರುತೆರೆ ನಟಿ ದಿವ್ಯಾ ಭಟ್ನಾಗರ್​ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇವರಿಗೆ 34 ವರ್ಷ ವಯಸ್ಸಾಗಿತ್ತು.

ಸ್ಟಾರ್ ಪ್ಲಸ್​ನ ‘ಯೆ ರಿಷ್ತಾ ಕ್ಯಾ ಕೆಹಲಾತಾ ಹೈ’ ಸೇರಿದಂತೆ ಹಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ದಿವ್ಯಾ ಮನೆಮಾತಾಗಿರುವ ನಟಿ.

ಕಳೆದ ವಾರ ಅವರ ಆಮ್ಲಜನಕದ ಮಟ್ಟವು ಕುಸಿಯುತ್ತಿದ್ದ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಕಳೆದವಾರವೇ ಹೇಳಿದ್ದರು.

ಮಗಳಿಗೆ ಅನೇಕ ದಿನಗಳಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತಿತ್ತು. ಇದೀಗ ಕರೊನಾ ವೈರಸ್​ ತಗುಲಿದ ಮೇಲೆ ಪರಿಸ್ಥಿತಿ ಹದಗೆಟ್ಟಿದೆ ಎಂದು ಈಚೆಗಷ್ಟೇ ದಿವ್ಯಾ ತಾಯಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ ದಿವ್ಯಾ ಮಾತ್ರ ನಗುಮೊಗದಿಂದ ಆ ನೋವಿನಲ್ಲಿಯೂ ತಮ್ಮ ಅಭಿಮಾನಿಗಳಿಗೆ ತಮ್ಮ ಜೀವನಕ್ಕಾಗಿ ಪ್ರಾರ್ಥಿಸಿಕೊಳ್ಳಿ ಎಂದು ಹೇಳಿದ್ದರು. ಈ ಕುರಿತು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದ ಅವರು, ನಾನು ಗುಣಮುಖರಾಗಿ ಬರಲಿ ಎಂದು ಪ್ಲೀಸ್​ ಎಲ್ಲರೂ ಹಾರೈಸಿ ಎಂದಿದ್ದರು.

ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ದಿವ್ಯಾ ದಂಪತಿ ನಡುವೆ ಜಗಳವಾಗಿದ್ದರಿಂದ ಮಗಳೊಂದಿಗೆ ದಿವ್ಯಾ ಒಂಟಿಯಾಗಿ ವಾಸಿಸುತ್ತಿದ್ದರು. ಕೌಟುಂಬಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ದೆಹಲಿಯಿಂದ ತಮ್ಮ ಮಗಳು ಮುಂಬೈಗೆ ಶಿಫ್ಟ್​ ಆಗಿದ್ದಳು. ಅವಳ ಪತಿ ತೀರಾ ಹಿಂಸೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಅವಳ ಆರೋಗ್ಯದ ಮೇಲೆ ಅಪಾರ ಪರಿಣಾಮ ಬೀರಿತ್ತು. ಈ ಮಧ್ಯೆಯೇ ಕರೊನಾ ಕಾಣಿಸಿಕೊಂಡು ಅವಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಕಳೆದ ವಾರ ದಿವ್ಯಾ ತಾಯಿ ಮಾಧ್ಯಮದೆದುರು ಕಣ್ಣೀರು ಹಾಕಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net