ಡಿಸಿಎಂ ಕಾರಜೋಳ ಕರೊನಾದಿಂದ ಗುಣಮುಖ- ಆಸ್ಪತ್ರೆಯಿಂದ ಡಿಸ್​ಚಾರ್ಜ್​

karjola
Published on

ಬಾಗಲಕೋಟೆ: ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ಕರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ.

ಕರೊನಾ ಸೋಂಕಿನಿಂದಾಗಿ ಸೆಪ್ಟೆಂಬರ್ 22ರಂದು ಇವರು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಗುಣಮುಖರಾಗಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಕಾರಜೋಳ ಅವರು, ಕರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ. ತಮ್ಮೆಲ್ಲರ ಶುಭ ಹಾರೈಕೆ ಹಾಗೂ ಭಗವಂತನ ಕೃಪೆಯಿಂದ ನಾನೂ ಗುಣಮುಖವಾಗಿದ್ದೇನೆ.

ನನಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಮಕ್ಕಳ ರೂಪದಲ್ಲಿ ಹಾರೈಕೆ ಮಾಡಿದ ಸ್ಟಾಫ್ ನರ್ಸ್​ಗಳಿಗೆ ಅಭಾರಿಯಾಗಿದ್ದೇನೆ. ಶೀಘ್ರಗುಣಮುಖವಾಗುವಂತೆ ಶುಭ ಹಾರೈಸಿದ ತಮ್ಮೆಲ್ಲರಿಗೂ ಅನಂತ ಧನ್ಯವಾದಗಳು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net