ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಕಾಂಗ್ರೆಸ್‌ ಮಾಜಿ ಶಾಸಕ ಹಜಾರಿಕಾ ನಿಧನ

assam
Published on

ಅಸ್ಸಾಂ: ಕಾಂಗ್ರೆಸ್ ಮುಖಂಡ ಮತ್ತು ಅಸ್ಸಾಂನ ಡೆರ್ಗಾಂವ್ ಕ್ಷೇತ್ರದ ಮಾಜಿ ಶಾಸಕ ಅರೋಟಿ ಹಜಾರಿಕಾ ಕಚಾರಿ ಇವರು ಇಂದು ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿದೆ.

‌ಅರೋಟಿ ಹಜರಿಕಾ ಕಚಾರಿ, ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ಈ ಸಂಬಂಧ ಡೆರ್ಗಾಂವ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಅವರು ಇಂದು ಕೊನೆಯುಸಿರೆಳೆದಿದ್ದಾರೆ.

ಅರೋಟಿ ಹಜರಿಕಾ ಕಚಾರಿ ಅವರು 2011 ರಿಂದ 2016 ರವರೆಗೆ ಅಸ್ಸಾಂನಲ್ಲಿ ತರುಣ್ ಗೊಗೊಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು.

ಕಳೆದ ಬಾರಿ ಅಸ್ಸಾಂನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಎಜಿಪಿಯ ಭಬೇಂದ್ರ ನಾಥ್ ಭಾರಲಿಯ ವಿರುದ್ಧ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. 

ಏತನ್ಮಧ್ಯೆ, ಮಾಜಿ ಶಾಸಕರ ನಿಧನವನ್ನು ಖಂಡಿಸಿ ಹಲವಾರು ಮುಖಂಡರು ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net