ಬರ್ಬರ ಹತ್ಯೆಯಾದ ನನ್ನ ತಂದೆಯ ಕೊಲೆಗಾರರನ್ನು ಬಂಧಿಸಿ ನ್ಯಾಯ ಕೊಡಿಸಿ: ನಾಲ್ಕರ ಪೋರನ ಕಣ್ಣೀರು

protest
Published on

ನವದೆಹಲಿ: ಅದು 2016ರ ಡಿಸೆಂಬರ್ 26. ಆಗ ನನಗಿನ್ನೂ ಮೂರು ತಿಂಗಳು. ಅಂದು ನನ್ನ ತಂದೆಯನ್ನು 11 ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದರು. ಇದುವರೆಗೆ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿಲ್ಲ. ಅಪ್ಪ ಅಮ್ಮ ಮಾಡಿಕೊಂಡಿರುವ ಮನವಿಗೆ ಬೆಲೆ ಸಿಕ್ಕಿಲ್ಲ. ದಯವಿಟ್ಟು ನನಗೆ ನ್ಯಾಯಕೊಡಿಸಿ...

ಹೀಗೆಂದು ರಿಜ್ವಾನ್ ಸಾಹಿದ್ ಲಸ್ಕರ್ ಎಂಬ ನಾಲ್ಕು ವರ್ಷದ ಬಾಲಕ ‘I WANT JUSTICE’ ಎಂಬ ಪ್ಲಕಾರ್ಡ್ ಹಿಡಿದು ಮನವಿ ಮಾಡಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ. ಅಸ್ಸಾಂನ ಕ್ಯಾಚರ್ ಜಿಲ್ಲೆಯ ಸೋನಾಯ್‌ ಎಂಬ ಪ್ರದೇಶದಲ್ಲಿ ಈತನ ತಂದೆ ಅಲೋಮ್ ಲಸ್ಕರ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಸಹಿದುಲ್ ಅಲೋಮ್ ಲಸ್ಕರ್ ಅವರನ್ನು ಗುತ್ತಿಗೆದಾರನಾಗಿದ್ದರಿಂದ ಮತ್ತು ಹಲವು ರಹಸ್ಯಗಳ ಬಗ್ಗೆ ತಿಳಿದುಕೊಂಡಿದ್ದರಿಂದ ಮರಳು ಮಾಫಿಯಾದವರು ಕ್ರೂರವಾಗಿ ಕೊಲೆ ಮಾಡಿದ್ದರು ಎನ್ನಲಾಗಿದೆ. ಆದರೆ ಉದ್ದೇಶಪೂರ್ವಕವಾಗಿ ಪೊಲೀಸರು ಅವರನ್ನು ಬಂಧಿಸಿಲ್ಲ ಎಂಬ ಗಂಭೀರ ಆರೋಪವಿದೆ.

ಈ ಹಿಂದೆ ಅಲೋಮ್ ಲಸ್ಕರ್ ಅವರ ಪತ್ನಿ ಈ ಕೊಲೆಗೆ ಸಂಬಂಧಿಸಿದಂತೆ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರೂ ಇದುವರೆಗೆ ಪ್ರಯೋಜನ ಆಗಲಿಲ್ಲ. ಆದ್ದರಿಂದ ಇದೀಗ ಬಾಲಕ ಬೀದಿಗಿಳಿದಿದ್ದಾನೆ. ಈ ಕುರಿತು ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿರುವ ಬಾಲಕ ಅಪರಾಧಿಗಳಿಗೆ ಶಿಕ್ಷೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಒತ್ತಾಯಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net