ನನ್ನ ಪತಿ ನಮ್ಮ ನಾಲ್ಕು ವರ್ಷದ ಮಗುವನ್ನು ಕರೆದುಕೊಂಡು ಹೋಗುತ್ತೇನೆ. ನಮ್ಮ ತಂದೆ ತಾಯಿಯೇ ಸಾಕುತ್ತಾರೆ. ನೀನು ನನಗೆ ಬೇಡ. ನಮ್ಮ ಮನೆಗೆ ಬರಬೇಡ ಎನ್ನುತ್ತಿದ್ದಾರೆ. ನಾನು ಮಗುವನ್ನು ಕೊಡಲೇ ಬೇಕೇ?
ಉತ್ತರ: ನೀವು ಹೆದರ ಬೇಕಾಗಿಲ್ಲ. ಸಾಮಾನ್ಯವಾಗಿ ಐದು ವರ್ಷಕ್ಕೆ ಒಳಗಿನ ವಯಸ್ಸಿನ ಮಗುವನ್ನು ತಾಯಿಯ ಅಭಿರಕ್ಷಣೆ/ಕಸ್ಟಡಿಯಲ್ಲಿಯೇ ಇರಲು ನ್ಯಾಯಾಲಯ ಅವಕಾಶ ಮಾಡಿಕೊಡುತ್ತದೆ.
ನಿಮಗೆ ಹೆದರಿಕೆ ಇದ್ದರೆ ನ್ಯಾಯಾಲಯದಲ್ಲಿ ನೀವು ಪ್ರಕರಣ ದಾಖಲಿಸಿ, ಮಗುವನ್ನು ನಿಮ್ಮ ಪತಿ ನಿಮ್ಮಿಂದ ಬೇರ್ಪಡಿಸ ಬಾರದು ಎನ್ನುವ ತಾತ್ಕಾಲಿಕ ನಿರ್ಬಂಧಕ ಆದೇಶವನ್ನೂ /ಟೆಂಪೊರರಿ ಇಂಜಂಕ್ಷನ್ ಆರ್ಡರನ್ನೂ ಪಡೆಯಬಹುದು.