

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷೆನ್ನ (ಸಿಬಿಎಸ್‌ಇ) 12ನೇ ತರಗತಿ ಫಲಿತಾಂಶದ ಬೆನ್ನಲ್ಲೇ 10ನೇ ತರಗತಿ ಫಲಿತಾಂಶವೂ ಪ್ರಕಟಗೊಂಡಿದೆ. ಮಾಮೂಲಿನಂತೆ ಇವೆರಡು ತರಗತಿಗಳಲ್ಲಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಟರ್ಮ್ -2 ಪರೀಕ್ಷೆಯನ್ನು ಕಳೆದ ಏಪ್ರಿಲ್ 26 ರಿಂದ ಮೇ 24 ವರೆಗೆ ನಡೆಸಲಾಗಿತ್ತು. ಸುಮಾರು 21 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಬಾರಿ ಶೇ 94.40. ಫಲಿತಾಂಶ ದಾಖಲಾಗಿದ್ದು, ಕಳೆದ ಬಾರಿಗಿಂತ ಈ ಸಲ ಫಲಿತಾಂಶದಲ್ಲಿ ಪ್ರಗತಿ ಕಂಡಿದೆ.
ಫಲಿತಾಂಶವನ್ನು cbse.gov.in; cbseresults.nic.in; parikshasangam.cbse.gov.in ಅಥವಾ results.cbse.nic.in ಇಲ್ಲಿಂದ ಪಡೆಯಬಹುದು.
http://cbse.gov.in ಅಥವಾ http://cbresults.nic.in ಅಧಿಕೃತ ವೆಬ್ಸೈಟ್ಗಳಾಗಿವೆ. ಇವುಗಳನ್ನು ಓಪನ್ ಮಾಡಿದ ಬಳಿಕ Result ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿದಾಗ ಇನ್ನೊಂದು ವೆಬ್‌ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಸಿಬಿಎಸ್ 10ನೇ ತರಗತಿಗಳ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು. ನೋಂದಣಿ ಸಂಖ್ಯೆ, ಶಾಲೆಯ ಸಂಖ್ಯೆ, ಜನ್ಮ ದಿನಾಂಕ, ಪ್ರವೇಶ ಪತ್ರದ ಐಡಿ ನಂಬರ್‌ನ್ನ ನಮೂದಿಸಿದರೆ ನಿಮ್ಮ ರಿಸಲ್ಟ್ ಸಿಗುತ್ತದೆ.
ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ಮಾರ್ಕ್ ಶೀಟ್ ಮತ್ತು ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬೇಕಾದರೆ ತಮ್ಮ ಶಾಲೆಗಳನ್ನು ಸಂಪರ್ಕಿಸಬೇಕು. ಅಲ್ಲಿಂದ ಮತ್ತು ಡಿಜಿಲಾಕರ್ ಪಿನ್ ಕೇಳಬೇಕು. ಈ ಪಿನ್ ಸಂಖ್ಯೆಯನ್ನು ಭದ್ರತಾ ಕ್ರಮವಾಗಿ CBSE ಪರಿಚಯಿಸಿದೆ.
ಎಸ್ಎಂಎಸ್ ಮೂಲಕ ಪಡೆಯಲು, ವಿದ್ಯಾರ್ಥಿಗಳು ತಮ್ಮ ಫೋನ್‌ನ ಸಂದೇಶ ಬಾಕ್ಸ್‌ಗೆ ಹೋಗಿ ತಮ್ಮ CBSE ರೋಲ್ ನಂಬರ್ ಟೈಪ್ ಮಾಡಬೇಕು. ಈಗ ಈ ಸಂದೇಶವನ್ನು 7738299899 ಗೆ ಕಳುಹಿಸಬೇಕು. ಕೆಲವೇ ಸಮಯದಲ್ಲಿ ನಿಮ್ಮ ಫಲಿತಾಂಶವು SMS ಮೂಲಕ ಅದೇ ಸಂಖ್ಯೆಗೆ ಬರುತ್ತದೆ. (ಏಜೆನ್ಸೀಸ್)