ಕೇಂದ್ರ ಸಚಿವ ರಾಣೆಗೆ ಬಿಗ್​ ಶಾಕ್​! ಬಂಗಲೆ ಕೆಡವಲು ಹೈಕೋರ್ಟ್​ ಆದೇಶ, 10 ಲಕ್ಷ ರೂ. ದಂಡ

minister
Published on

ಮುಂಬೈ: ಕೇಂದ್ರ ಸಚಿವ ನಾರಾಯಣ ರಾಣೆ ಅವರಿಗೆ ಬಾಂಬೆ ಹೈಕೋರ್ಟ್​ ಬಿಗ್​ ಶಾಕ್​ ನೀಡಿದೆ. ಅವರು ನಿರ್ಮಿಸಿರುವ ಬಂಗಲೆಯನ್ನು ನೆಲಸಮ ಮಾಡುವಂತೆ ಮುಂಬೈ ಮಹಾನಗರ ಪಾಲಿಕೆಗೆ ಕೋರ್ಟ್​ ನಿರ್ದೇಶಿಸಿದೆ.

ಮುಂಬೈನ ಜುಹುದಲ್ಲಿ ಸಚಿವರು ನಿರ್ಮಿಸಿರುವ ಬಂಗಲೆ ಅನಧಿಕೃತವಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಇವರಿಗೆ ನೋಟಿಸ್​ ಜಾರಿಗೊಳಿಸಿತ್ತು. ಈ ನೋಟಿಸ್​ ಅನ್ನು ಅವರು ಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಆದರೆ ಬಂಗಲೆ ಅನಧಿಕೃತವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಸಮಜಾಯಿಷಿಯ ಅಗತ್ಯವಿಲ್ಲ ಎಂದ ಹೈಕೋರ್ಟ್​, ಅದನ್ನು ಕೆಡವಲು ನಿರ್ದೇಶಿಸಿದೆ.

ಅಷ್ಟೇ ಅಲ್ಲದೇ, ಅನಧಿಕೃತವಾಗಿ ಬಂಗಲೆ ನಿರ್ಮಿಸಿರುವ ಹಿನ್ನೆಲೆಯಲ್ಲಿ ರಾಣೆ ಅವರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. ನಾರಾಯಣ ರಾಣೆ ಸದ್ಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net