ಬಾಲಿವುಡ್‌ನ ಇಬ್ಬರು ಮೇರುನಟರ ಆರೋಗ್ಯಸ್ಥಿತಿ ಗಂಭೀರ: ಆಸ್ಪತ್ರೆಗೆ ದಾಖಲು

actors
Published on

ಮುಂಬೈ: ಖ್ಯಾತ ಬಾಲಿವುಡ್‌ ನಟರಾದ ದಿಲೀಪ್‌ ಕುಮಾರ್‌ ಹಾಗೂ ನಾಸಿರುದ್ದೀನ್‌ ಷಾ ಇಬ್ಬರ ಆರೋಗ್ಯಸ್ಥಿತಿ ಗಂಭೀರವಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನ್ಯುಮೋನಿಯಾದಿಂದ ಬಳಲುತ್ತಿರುವ ನಾಸಿರುದ್ದೀನ್​ ಷಾ ಶ್ವಾಸಕೋಶದಲ್ಲಿ ಪ್ಯಾಚ್​​ಗಳು ಕಂಡು ಬಂದಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ಸಿಟಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಇಂದು ಬೆಳಗ್ಗೆ ನಿರ್ಮಾಪಕ ರಾಜ್​ ಕೌಶಲ್​ ಅವರು ಮೃತಪಟ್ಟಿದ್ದು, ಅದರ ಬೆನ್ನಲ್ಲೇ ಷಾ ಅವರ ಸಾವಿನ ಸುದ್ದಿಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಸದ್ಯ ಅವರಿಗೆ ಚಿಕಿತ್ಸೆ ಮುಂದುವರೆದಿದ್ದು ರತ್ನಾ ಪಾಠಕ್​ ಶಾ ಆಸ್ಪತ್ರೆಯಲ್ಲೇ ತಂಗಿದ್ದಾರೆ.

ಅದೇ ಇನ್ನೊಂದೆಡೆ,ಇನ್ನೋರ್ವ ಖ್ಯಾತ ಬಾಲಿವುಡ್‌ ನಟ ದಿಲೀಪ್ ಕುಮಾರ್‌ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಅವರನ್ನು ಉಪ ನಗರದ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಜೂನ್ 6 ರಂದು ಕೂಡ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. 10 ದಿನ ಆಸ್ಪತ್ರೆಯಲ್ಲಿದ್ದ ಅವರನ್ನು ಡಿಸ್‌ಚಾರ್ಜ್‌ ಮಾಡಲಾಗಿತ್ತು. ಇಂದು ಪುನಃ ಅವರಿಗೆ ಗಂಭೀರ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗಿದೆ.

ಈ ಇಬ್ಬರೂ ನಟರು ಶೀಘ್ರದಲ್ಲಿ ಗುಣಮುಖರಾಗಿ ಬರಲೆಂದು ಜಾಲತಾಣದಲ್ಲಿ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಅಂದಹಾಎ ನಾಸಿರುದ್ದೀನ್‌ ಷಾ ಅವರಿಗೆ 70 ವರ್ಷದ ಹಾಗೂ ದಿಲೀಪ್‌ ಕುಮಾರ್‌ ಅವರಿಗೆ 98 ವರ್ಷ ವಯಸ್ಸು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net