ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ಕಪ್ಪು ಹುಲಿ!

black tiger
Published on

ಭುವನೇಶ್ವರ: ಮೈಮೇಲೆ ಕಪ್ಪುಪಟ್ಟಿ ಹೊಂದಿರುವ ಹುಲಿಯೊಂದು ಒಡಿಶಾದ ಕಾಡಿನಲ್ಲಿ ಕಂಡು ಬಂದಿದೆ. ಬಲು ಅಪರೂಪ ಎನ್ನುವ ಹುಲಿ ಇದಾಗಿದ್ದು, ಇದರ ಫೋಟೋ ಹಾಗೂ ವಿಡಿಯೋಗಳು ಸಕತ್‌ ವೈರಲ್‌ ಆಗಿದೆ.

ವನ್ಯಜೀವಿ ಪ್ರಿಯ ಹಾಗೂ ಹವ್ಯಾಸಿ ಛಾಯಾಗ್ರಾಹಕ ಸೌಮೆನ್ ಬಜ್ಪೇಯಿ ಈ ಚಿತ್ರಗಳನ್ನು ಸೆರೆಹಿಡಿದ್ದಾರೆ.ದಕ್ಷಿಣ ಬಾಜ್ಪಯೀ ಭಾಗದಲ್ಲಿ ಸುತ್ತಾಡುವಾಗ ಅವರಿಗೆ ಈ ಹುಲಿ ಕಾಣಿಸಿದೆ.

ಇದನ್ನೂ ಓದಿ: ಆಶೀರ್ವದಿಸಲು ಬಂದ ಪಾದ್ರಿಗೆ ಬಾಲೆಯ ಹೈ ಫೈ- ಕ್ಯೂಟ್​ ವಿಡಿಯೋ ವೈರಲ್​

ಮೆಲನಾಸ್ಟಿಕ್​ ಟೈಗರ‌ ಎನ್ನುವುದು ಇದರ ಅಧಿಕೃತ ಹೆಸರು. ಒಡಿಶಾದಲ್ಲಿ ಮಾತ್ರ ಕಂಡು ಬರುವ ಈ ಹುಲಿ ಸಂತತಿಯಲ್ಲಿ ಈಗ ಉಳಿದುಕೊಂಡಿರುವುದು ಏಳೆಂಟು ಹುಲಿಗಳು ಮಾತ್ರ. ಜಗತ್ತಿನಲ್ಲಿರುವ ಕಪ್ಪು ಹುಲಿಗಳ ಪೈಕಿ ಶೇ. 70 ರಷ್ಟು ಒಡಿಶಾದಲ್ಲೇ ಇವೆ. ಇಲ್ಲಿನ ಸಿಂಪಿಲಾಲ್‌ ಹುಲಿ ಸಂರಕ್ಷಣಾ ಧಾಮದಲ್ಲಿ ಹೆಚ್ಚಿನ ಕಪ್ಪು ಹುಲಿಗಳನ್ನು ಕಾಣಬಹುದಾಗಿದೆ.

2018ರ ಹುಲಿ ಗಣತಿ ಪ್ರಕಾರ ಕಪ್ಪು ಹುಲಿಗಳ ಸಂತತಿ ಗಣನೀಯವಾಗಿ ಇಳಿಕೆ ಕಾಣುತ್ತಿದೆಯಂತೆ. ಬೇಟೆ, ಕಾಡ್ಗಿಚ್ಚಿಗೆ ಸಿಲುಕಿ ಹುಲಿಗಳ ಸಂಖ್ಯೆ ಕಡಿಮೆ ಆಗಿದೆ ಎನ್ನುತ್ತಾರೆ ತಜ್ಞರು.

ಬೇರೆ ಬೇರೆ ತಳಿಗಳ ಹುಲಿಗಳು ಸಂಧಿಸಿದಾಗ ಜನಿಸುವ ಈ ಕಪ್ಪು ಹುಲಿಗಳು ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿರುತ್ತವೆ. ಅನುವಂಶೀಯ ಸಮಸ್ಯೆಯಿಂದಾಗಿ ದೇಹದ ಮೇಲೆ ಕಪ್ಪು ಪಟ್ಟಿ ಕಾಣಿಸಿಕೊಂಡಿದೆ ಎಂಬುದು ಅವರ ಅಭಿಮತ. ಇಂಥ ಮೊದಲ ಹುಲಿಯನ್ನು 1990ರಲ್ಲಿ ಭಾರತದಲ್ಲಿ ಪತ್ತೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net