ಗೋದಾವರಿ ತಟದಲ್ಲಿ ಕಂಡುಬಂತು ಬೃಹದಾಕಾರ ಬಸವನ ಹುಳು ‘ಆಸ್ಟ್ರೇಲಿಯಾ ಕಹಳೆ’

snail
Published on

ಹೈದರಾಬಾದ್: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನದಿ ಪಾತ್ರದಲ್ಲಿ ಬೃಹದಾಕಾರದ ಸುಂದರವಾಗಿರುವ ಅಪರೂಪದ ಬಸವನ ಹುಳು ಪತ್ತೆಯಾಗಿದೆ.

ಈ ಬಸವನ ಹುಳು ಸೈರಿಂಕ್ಸ್ ಅರುವ್ಯಾನಸ್ ಎಂಬ ಜಾತಿಗೆ ಸೇರಿದ್ದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದು ಜಗತ್ತಿನಲ್ಲಿಯೇ ಭೂಮಿ ಮತ್ತು ನೀರಿನಲ್ಲಿ ಕಂಡು ಬರುವ ಅತೀ ದೊಡ್ಡ ಬಸವನ ಹುಳು ಎನ್ನಲಾಗಿದೆ. ಇದು 70 ಸೆ.ಮೀ.ವರೆಗೆ ಉದ್ದ ಬೆಳೆಯಲಿದ್ದು, 18 ಕೆಜಿವರೆಗೆ ತೂಗಲಿದೆ.

ಇದು ಆಸ್ಟ್ರೇಲಿಯಾ ಕಹಳೆ ಎಂದೇ ಜನಪ್ರಿಯವಾಗಿದೆ. ಅಳಿವಿನಂಚಿನಲ್ಲಿರುವ ಮಾಂಸಾಹಾರಿ ಬಸವನಹುಳು. ಇದರ ಚಿಪ್ಪುಗಳು ಕೂಡ ಅಷ್ಟೇ ಜನಪ್ರಿಯವಾಗಿದೆ. ಆದರೆ ಇದನ್ನು ಮಾಂಸಕ್ಕಾಗಿ ಕೊಲ್ಲಲಾಗುತ್ತಿರುವ ಕಾರಣ, ಅಳಿವಿನಂಚಿಗೆ ಬಂದಿದೆ.

ಆಂಧ್ರಪ್ರದೇಶದ ಗೋದಾವರಿ ನದಿ ಪ್ರದೇಶದಲ್ಲಿ ಪತ್ತೆಯಾದ ಕಿತ್ತಳೆ ಬಣ್ಣದ ಬಸವನ ಹುಳು ಜನರಲ್ಲಿ ಕುತೂಹಲ, ಅಚ್ಚರಿ ಮೂಡಿಸಿದ್ದು ಸದ್ಯ ಇದನ್ನು ಹರಾಜು ಮಾಡಲಾಗಿದೆ. ಇದನ್ನು 18 ಸಾವಿರ ರೂಪಾಯಿಗೆ ಕೊಟ್ಟು ಖರೀದಿ ಮಾಡಲಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವಿವರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net