

ಉತ್ತರ; ನಿಮ್ಮ ಪರಿಸ್ಥಿತಿ ಕೇಳಿ ಅನುಕಂಪ ಆಗುತ್ತಿದೆ. ಆದರೆ, ಆಟಿಸಂ ಇರುವ ಮಕ್ಕಳನ್ನು ಬೇರೆ ಸಾಮಾನ್ಯ ಮಕ್ಕಳ ಜೊತೆಗೆ ಓದಿಸಲು ನೀವು ಕೇಸು ಹಾಕಿ ಆದೇಶ ಪಡೆಯಲಾಗುವುದಿಲ್ಲ. ಆಟಿಸಂ ಯಾವ ಹಂತದಲ್ಲಿ ಇದೆ ಎನ್ನುವುದೂ ನೋಡಲಾಗುತ್ತದೆ.
ಮೇಲಾಗಿ ನೀವು ಹೇಳಿರುವಂತಹ ಪರಿಸ್ಥಿತಿಯಲ್ಲಿ , ನಿಮ್ಮ ಮಗನನ್ನು ನಿಭಾಯಿಸಲು ಅವರಿಗೂ ಕಷ್ಟವಾಗುತ್ತದೆ. ಆಟಿಸಂ ಮಕ್ಕಳಿಗಾಗೇ ಪ್ರತ್ಯೇಕ ಶಾಲೆ ಇರುತ್ತದೆ. ಅಲ್ಲಿ ಸೇರಿಸುವುದರಿಂದ ನಿಮ್ಮ ಮಗನಿಗೂ ಒಳ್ಳೆಯದಾಗುತ್ತದೆ. ಅಲ್ಲಿ ಅವರನ್ನು ನೋಡಿಕೊಳ್ಳಲು ಪರಿಣತ ಶಿಕ್ಷಕರು ಇರುತ್ತಾರೆ.
ದಯವಿಟ್ಟು ನೀವು ಆ ಪ್ರಯತ್ನವನ್ನು ಮಾಡಿ. ಹೆಚ್ಚಿನ ವಿವರಗಳಿಗೆ ನಿಮ್ಮ ತಾಲ್ಲೂಕಿನ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯನ್ನು ಸಂಪರ್ಕಿಸಿ.