ಅಶ್ವತ್ಥ ಎಲೆಯಲ್ಲಿ ಸಚಿವರಿಗೆ ಹೀಗೊಂದು ಶುಭಾಶಯ: ಉಡುಪಿಯ ಕಲಾವಿದನಿಂದ ಅಪರೂಪದ ಗೌರವ

1149126
Published on

ಉಡುಪಿ: ಉಡುಪಿಯ ವಿಶಿಷ್ಟ ಕಲಾವಿದ ಮಹೇಶ್ ಮರ್ಣೆ, ಮತ್ತೊಮ್ಮೆ ಅಪರೂಪದ ಕಲಾಕೃತಿಯೊಂದನ್ನು ರಚಿಸಿದ್ದಾರೆ. ಹಸಿ ಅಶ್ವತ್ಥದ ಎಲೆಯಲ್ಲಿ ಈಗಾಗಲೇ ಹಲವಾರು ಸೆಲೆಬ್ರಿಟಿಗಳ ಪಡಿಯಚ್ಚು ಮೂಡಿಸಿದ ಈ ಕಲಾವಿದ ಇದೀಗ ಉಡುಪಿ ಜಿಲ್ಲೆಯ ಇಬ್ಬರು ನೂತನ ಸಚಿವರಿಗೆ ತನ್ನದೇ ಶೈಲಿಯಲ್ಲಿ ಶುಭಾಶಯ ಕೋರಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿ.ಸುನಿಲ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಈ ಇಬ್ಬರು ನಾಯಕರ ಪಡಿಯಚ್ಚನ್ನು ಅಶ್ವತ್ಥದ ಎಲೆಯಲ್ಲಿ ಚಿತ್ರಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣವಚನ ಸ್ವೀಕರಿಸಿದಾಗ ಇವರು ರಚಿಸಿದ ಕಲಾಕೃತಿ, ರಾಜ್ಯದ್ಯಂತ ವೈರಲ್ ಆಗಿತ್ತು. ಯಕ್ಷಗಾನದ ಕಿರೀಟ ದಂತಿರುವ ಅಶ್ವತ್ಥದ ಎಲೆಯ ನಡುವೆ, ಸೆಲೆಬ್ರಿಟಿಗಳ ಭಾವಚಿತ್ರವನ್ನು ನೋಡುವುದೇ ಒಂದು ವಿಶಿಷ್ಟ ಅನುಭವ.

ಕಸದ ತುಂಡಿನಂತೆ ಕಾಣುವ ಎಲೆಯನ್ನು, ಮುಗಿಲಿಗೆ ಹಿಡಿದಾಗ ಸುಂದರ ಮುಖ ಅನಾವರಣಗೊಳ್ಳುತ್ತದೆ. ಆಯಾ ನಾಯಕರ ಅಭಿಮಾನಿಗಳಿಗೆ ಈ ಅಪೂರ್ವ ಕಲಾಕೃತಿ ರೋಮಾಂಚನ ಮೂಡಿಸುವುದು ಸುಳ್ಳಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net