33ಕ್ಕೇ ಲೈಂಗಿಕಾಸಕ್ತಿ ಕುಂದುಹೋಗಿದೆ- ಪತಿ ಹತ್ತಿರ ಬಂದರೆ ಸಿಟ್ಟುಬರುತ್ತದೆ: ಏನು ಮಾಡಲಿ?

nyayadevate
Published on
ನನ್ನ ವಯಸ್ಸು 33 ವರ್ಷ. ಮದುವೆಯಾಗಿ 11 ವರ್ಷಗಳಾದವು. 9 ವರ್ಷದ ಮಗಳಿದ್ದಾಳೆ. ಒಂದು ವರ್ಷದಿಂದ ನಾನು ನನ್ನ ಗಂಡ ರಾತ್ರಿ ಸೇರುವುದನ್ನು ಬಿಟ್ಟಿದ್ದೀವಿ. ಯಾಕೆಂದರೆ ಅವರು ನನ್ನನ್ನು ಮುಟ್ಟೋಕೆ ಬಂದಾಗ ನಾನು ಸಿಡಿಮಿಡಿಗೊಳ್ಳುತ್ತೇನೆ. ಅಲರ್ಜಿ ಬೇರೆ ಶುರುವಾಗಿದೆ. ಲೈಂಗಿಕ ಸಂಬಂಧದಲ್ಲಿ ನನಗೆ ಆಸಕ್ತಿ ಇಲ್ಲ. ಸಂಭೋಗವೆಂದರೆ ಅಸಹ್ಯವಾಗುತ್ತದೆ. ಇದನ್ನು ನನ್ನ ಗಂಡನ ಹತ್ತಿರ ಹೇಳಿದರೆ ಅವರು ತುಂಬ ಬೇಜಾರು ಮಾಡಿಕೊಂಡಿದ್ದಾರೆ. ದಯವಿಟ್ಟು ಇದಕ್ಕೆ ಏನು ಪರಿಹಾರವಿದೆ ಅಂತ ತಿಳಿಸಿ.

ಉತ್ತರ: ನೀವು ನಿಮ್ಮ ಪತ್ರದಲ್ಲಿ ಅಲರ್ಜಿಯ ಬಗ್ಗೆ ತಿಳಿಸಿದ್ದೀರಿ. ಆದರೆ ಅದರ ಬಗ್ಗೆ ಸ್ಪಷ್ಟವಾಗಿ ವಿವರ ನೀಡಿಲ್ಲ. ಒಮ್ಮೆ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದಲ್ಲಿ ಅಲರ್ಜಿಯ ತೊಂದರೆ ಸರಿಪಡಿಸಿಕೊಳ್ಳಬಹುದು.

ಅದಕ್ಕಾಗಿ ನೀವು ನಿಮ್ಮ ಲೈಂಗಿಕ ಜೀವನವನ್ನೇಕೆ ಕಳೆದುಕೊಳ್ಳುತ್ತೀರಿ? ನೀವು ನಿಮ್ಮ ಪತಿಯೊಂದಿಗೆ ಲೈಂಗಿಕ ಕ್ರಿಯೆಗೆ ಒಪ್ಪದಿರಲು ಅಲರ್ಜಿ ಮಾತ್ರ ಕಾರಣವೇ? ವೈವಾಹಿಕ ಬದುಕು ಭಾವನಾತ್ಮಕ ಮತ್ತು ಲೈಂಗಿಕತೆಯ ಮೇಲೇ ನಿಂತಿರುತ್ತದೆ. ನೀವಿಬ್ಬರೂ ಪರಸ್ಪರ ಸಂತೋಷದಿಂದ, ನೆಮ್ಮದಿಯಿಂದ ದಾಂಪತ್ಯ ನಡೆಸಬೇಕಾಗುತ್ತದೆ.

ಪರಸ್ಪರ ಪ್ರೀತಿಯ ನೋಟ, ನಗು, ಮಾತು, ಸ್ಪರ್ಶ ಎಲ್ಲವೂ ಇದ್ದಲ್ಲಿ ಮಾತ್ರ ಇಬ್ಬರ ನಡುವೆ ಬಾಂಧವ್ಯ ಗಟ್ಟಿಯಾಗುತ್ತದೆ. ಹಾಗಾಗಿ

ಈ ಕುರಿತು ಕೂಡ ಯೋಚಿಸಿ. ನೀವು ಒಮ್ಮೆ ಲೈಂಗಿಕ ತಜ್ಞರನ್ನೂ ಹಾಗೂ ಆಪ್ತಸಮಾಲೋಚಕರನ್ನೂ ಭೇಟಿಯಾಗಿ ಸರಿಯಾದ ರೀತಿಯ ಕೌನ್ಸೆಲಿಂಗ್ ಪಡೆಯಿರಿ.

ಹೆಚ್ಚಿನ ಆರೋಗ್ಯ ಮಾಹಿತಿಗೆ vijayavani.net ಭೇಟಿ ಕೊಟ್ಟು ಆರೋಗ್ಯ ಅಂಕಣ ನೋಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net