ನಟ ಅನುಪಮ್‌ ಖೇರ್‌ಗೆ ಬಿಗ್‌ ಶಾಕ್‌... ರಾತ್ರೋರಾತ್ರಿ 80 ಸಾವಿರ ಫಾಲೋವರ್ಸ್‌ ಮಿಸ್ಸಿಂಗ್‌!

anupamkher
Published on

ಮುಂಬೈ: ಬಾಲಿವುಡ್ ನ ಹಿರಿಯ ನಟ, ನಿರ್ಮಾಪಕ ಅನುಪಮ್ ಖೇರ್‌ ಸದಾ ಜಾಲತಾಣದಲ್ಲಿ ಸಕ್ರೀಯರಾಗಿರುತ್ತಾರೆ. ಒಂದಿಲ್ಲೊಂದು ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಅವರಿಗೆ ಅಪಾರ ಅಭಿಮಾನಿ ಬಳಗ, ಫಾಲೋವರ್ಸ್‌ಗಳೂ ಇದ್ದಾರೆ.

ಆದರೆ ನಿನ್ನೆ ರಾತ್ರಿ ಬೆಳಗಾಗುವುದರೊಳಗೆ ದೊಡ್ಡದೊಂದು ಶಾಕ್‌ ಕಾದಿತ್ತು. ಏಕೆಂದರೆ ಅವರ ಟ್ವಿಟರ್‌ ಖಾತೆಯಿಂದ 80 ಸಾವಿರ ಫಾಲೋವರ್ಸ್‌ ಬೆಳಗಾಗುವುದರೊಳಗೆ ನಾಪತ್ತೆಯಾಗಿಬಿಟ್ಟಿದ್ದಾರೆ. ಅಂದರೆ ಕಡಿಮೆಯಾಗಿದ್ದಾರೆ. ಇದಕ್ಕಿದ್ದಂತೆಯೇ ಹೀಗೆ ಏನಾಯಿತು ಎಂದು ಅನುಪಮ್‌ ಖೇರ್‌ ಕಕ್ಕಾಬಿಕ್ಕಿಯಾಗಿದ್ದಾರೆ.

ಈ ಕುರಿತು ಅವರು ಟ್ವಿಟ್ಟರ್ ಇಂಡಿಯಾಗೆ ಪ್ರಶ್ನೆ ಮಾಡಿ ತಮ್ಮ ಟ್ವಿಟರ್‌ ಖಾತೆಯಲ್ಲಿಯೇ ಶೇರ್‌ ಮಾಡಿಕೊಂಡಿದ್ದಾರೆ. ಏಕೆ ಹೀಗಾಗಿದೆ ಎಂದು ಕೇಳಿದ್ದಾರೆ. ಇದು ತಾಂತ್ರಿಕ ತೊಂದರೆಯೋ ಅಥವಾ ಇನ್ನೇನು ಸಮಸ್ಯೆ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅನುಪಮ್ ಖೇರ್‌, 'ಪ್ರೀತಿಯ ಟ್ವಿಟ್ಟರ್ ಮತ್ತು ಟ್ವಿಟ್ಟರ್ ಇಂಡಿಯಾ, 80 ಸಾವಿರ ಫಾಲೋವರ್ಸ್ ಕಳೆದ 36 ಗಂಟೆಗಳಲ್ಲಿ ನನ್ನ ಖಾತೆಯಿಂದ ಕಣ್ಮರೆಯಾಗಿದ್ದಾರೆ. ಇದಕ್ಕೆ ಕಾರಣವೇನು। ನಿಮ್ಮ ಆ್ಯಪ್‌ನಲ್ಲಿ ಏನಾದರೂ ತಾಂತ್ರಿಕ ದೋಷಗಳು ಇವೆಯೋ ಅಥವಾ ಇದರ ಹಿಂದೆ ಇನ್ನೇನಾದರೂ ಕಾರಣಗಳು ಇವೆಯೋ ಎಂದು ಪ್ರಶ್ನಿಸಿದ್ದಾರೆ. ಇದು ದೂರು ಅಲ್ಲ, ವಿಷಯ ತಿಳಿದುಕೊಳ್ಳಬೇಕಿದೆ ಎಂದಿದ್ದಾರೆ. ಈ ಬಗ್ಗೆ ಏನು ಉತ್ತರ ಬರಲಿದೆಯೋ ಕಾದು ನೋಡಬೇಕಿದೆ.

ಒನ್‌ ಡೇ ಸಿನಿಮಾನದ ನಂತರ ಅನುಪಮ್ ಖೇರ್ ದಿ ಲಾಸ್ಟ್ ಶೋ, ಮುಂಗಿಲಾಲ್ ರಾಕ್ಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇವರ ಪತ್ನಿ ನಟಿ ಮತ್ತು ರಾಜಕಾರಣಿ ಕಿರಣ್ ಖೇರ್ ಕ್ಯಾನ್ಸರ್‌ಗೆ ತುತ್ತಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net