

ಆದರೆ, ನನ್ನ ಮಕ್ಕಳು ಮತ್ತು ನಮ್ಮ ಅಕ್ಕನ ಮಕ್ಕಳು ನಮಗೂ ಸಮಭಾಗ ಕೊಡಬೇಕು , ಇಲ್ಲದಿದ್ದರೆ ಕೋರ್ಟಿಗೆ ಹೋಗುತ್ತೇವೆ ಎಂದು ಗಲಾಟೆ ಮಾಡುತ್ತಿದ್ದಾರೆ. ನಾವು ಸತ್ತ ಮೇಲೆ ನಾವು ಉಳಿಸಿದ್ದೆಲ್ಲಾ ನಿಮಗೇ ಎಂದರೆ ಒಪ್ಪುತ್ತಿಲ್ಲ. ದುರದೃಷ್ಟ ಎಂದರೆ ನನ್ನ ಹಾಗೂ ನ್ನನ ಅಕ್ಕನ ಮಕ್ಕಳು ಸರಿ ಇಲ್ಲ. ಅವರು ನಮ್ಮನ್ನು ಈಗಲೇ ದೂರ ಇಟ್ಟಿದ್ದಾರೆ. ಒಂದು ಬಿಡಿಗಾಸೂ ಸಹಾಯ ಮಾಡುವುದಿಲ್ಲ. ಕೊಂಡು ಕೊಳ್ಳುವವರು , ತಾತನ ಆಸ್ತಿ ಆದ್ದರಿಂದ ಮೊಮ್ಮಕ್ಕಳ ಸಹಿ ಬೇಕೇ ಬೇಕು ಎನ್ನುತ್ತಿದ್ದಾರೆ. ಈಗ ನಾವು ಏನು ಮಾಡಬೇಕು ಎಂದು ತಿಳಿಸಿ ಸಹಾಯ ಮಾಡಿ.
ಉತ್ತರ: ನೀವು ಹೆದರಬೇಕಾಗಿಲ್ಲ. ನಿಮ್ಮ ತಂದೆಯ ಸ್ವಯಾರ್ಜಿತ ಆಸ್ತಿ ಅವರ ಮರಣಾ ನಂತರ ನಿಮ್ಮ ಮತ್ತು ನಿಮ್ಮ ಅಕ್ಕನಿಗೆ ಇಬ್ಬರಿಗೂ ಸಮವಾಗಿ ಸೇರುತ್ತದೆ. ಅದು ನಿಮ್ಮಗಳ ಪ್ರತ್ಯೇಕ ಆಸ್ತಿ ಆಗಿರುತ್ತದೆ. ಅದರಲ್ಲಿ ನಿಮ್ಮ ಮಕ್ಕಳಿಗೆ, ನಿಮ್ಮ ಜೀವಿತ ಕಾಲದಲ್ಲಿ ಯಾವ ಹಕ್ಕೂ ಇರುವುದಿಲ್ಲ. ನಿಮ್ಮ ಮಕ್ಕಳ ಸಹಿ ಕ್ರಯ ಪತ್ರಕ್ಕೆ ಬೇಕಿರುವುದಿಲ್ಲ. ಅವರು ಕೇಸು ಹಾಕಿದರೆ , ಅದು ನಿಲ್ಲುವುದಿಲ್ಲ. ನೀವು ಯೋಚಿಸಬೇಡಿ. ಮೃತ ತಾತನ ಸ್ವಯಾರ್ಜಿತ ಆಸ್ತಿಯ ಮಾರಾಟವನ್ನು, ತಾತನ ಮಗ ಮತ್ತು ಮಗಳು ಮಾಡುವಾಗ , ಮೊಮ್ಮಕ್ಕಳ ಸಹಿ ಬೇಕಿಲ್ಲ.