VIDEO: ಗೆಳೆಯನ ಜತೆಗೆ ಆಮೀರ್​ಖಾನ್​ ಪುತ್ರಿ ಕಳೆದ ಮೋಜಿನ ಕ್ಷಣಗಳ ವಿಡಿಯೋ ವೈರಲ್

khan
Published on

ನವದೆಹಲಿ: ಬಾಲಿವುಡ್ ಅಮೀರ್ ಖಾನ್​ ತಮ್ಮ ಎರಡನೆಯ ಹಿಂದೂ ಪತ್ನಿಗೆ ವಿಚ್ಛೇದನ ನೀಡಿ ಸುದ್ದಿ ಮಾಡುತ್ತಿರುವ ಬೆನ್ನಲ್ಲೇ ಇದೀಗ ಅವರ ಮೊದಲ ಪತ್ನಿಯಿಂದ ಹುಟ್ಟಿದ ಮಗಳು ಇರಾಖಾನ್ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾಳೆ.

ತಮ್ಮ ಬಾಯ್​ಫ್ರೆಂಡ್​ ಜತೆ ಡೇಟಿಂಗ್​ ಮಾಡುತ್ತಿರುವ, ಮೋಜು ಮಸ್ತಿಯಲ್ಲಿ ತೊಡಗಿರುವ ವಿಡಿಯೋ ಅನ್ನು ಅವರು ಶೇರ್​ ಮಾಡಿದ್ದಾರೆ. ಫಿಟ್​ನೆಟ್​ ತರಬೇತುದಾರ ನೂಪುರ್ ಶಿಖಾರೆ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ಇರಾ, ಇನ್‌ಸ್ಟಾಗ್ರಾಮ್‌ನಲ್ಲಿ ಈ ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ.

ನೀವು ನನ್ನ ನಿರೂಪಕ ನನ್ನ ಲವ್​, ಡ್ರೀಮ್​ಬಾಯ್​ ಇತ್ಯಾದಿ ಹ್ಯಾಷ್​ಟ್ಯಾಗ್​ಗಳು ಸ್ಟುಪಿಡ್​ ಎನ್ನಿಸುತ್ತವೆ. ಅವೆಲ್ಲವುಗಳಿಗಿಂತಲೂ ಹೆಚ್ಚಾಗಿ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾಳೆ.

ಇರಾ ಖಾನ್ ಈ ವರ್ಷದ ಆರಂಭದಲ್ಲಿ ಪ್ರಾಮಿಸ್ ಡೇ ಸಂದರ್ಭದಲ್ಲಿ ಇನ್​ಸ್ಟಾಗ್ರಾಮ್​ನಲ್ಲಿ ನೂಪುರ್​ ಶಿಖಾರೆ ಜತೆಗಿನ ಸಂಬಂಧವನ್ನು ಬಹಿರಂಗಗೊಳಿಸಿದ್ದಳು. ಈ ದಂಪತಿಗೆ ಜುನೈದ್ ಎಂಬ ಮಗನೂ ಇದ್ದಾನೆ.

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net