ಜಮ್ಮು, ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ನಂತರದ ಮೊದಲ ಅಮರಯಾತ್ರೆಗೆ ಡೇಟ್​ ಫಿಕ್ಸ್​

amarayatre
Published on

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ನಂತರ ಇದೇ ಮೊದಲ ಬಾರಿಗೆ ಅಮರನಾಥ ಯಾತ್ರೆ ನಡೆಯಲಿದ್ದು ಅದರ ದಿನಾಂಕವನ್ನು ನಿಗದಿ ಮಾಡಲಾಗಿದೆ. 2019ರ ಆಗಸ್ಟ್​ 5ರಂದು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಲಾಗಿತ್ತು. ಇದಾದ ಬಳಿಕ ಕರೊನಾ ಹಿನ್ನೆಲೆಯಲ್ಲಿ ಯಾತ್ರೆ ನಡೆದಿರಲಿಲ್ಲ.

ಇದೀಗ ಅಮರನಾಥ ದೇವಾಲಯ ಮಂಡಳಿಯ ಸಭೆಯಲ್ಲಿ ಈ ವರ್ಷದ ದಿನವನ್ನು ನಿಗದಿ ಮಾಡಲಾಗಿದೆ. ಲೆಫ್ಟಿನೆಂಟ್ ಗವರ್ನರ್ ಜಿ.ಸಿ.ಮರ್ಮು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಿನಾಂಕವನ್ನು ಗೊತ್ತು ಮಾಡಲಾಗಿದೆ. ಯಾತ್ರೆಯು ಬರುವ ಜೂನ್ 23 ರಂದು ಆರಂಭವಾಗಲಿದೆ. ಇದು ಮುಕ್ತಾಯವಾಗುವ ದಿನ ಆಗಸ್ಟ್ 3. ಅಂದರೆ ಒಟ್ಟು 42 ದಿನಗಳವರೆಗೆ ಪ್ರಯಾಣ ಇರಲಿದೆ. ಕಳೆದ ಬಾರಿ 46 ದಿನಗಳ ಪ್ರಯಾಣವಿತ್ತು.

ಈ ಯಾತ್ರೆಗೆ ಹೋಗಬಯಸುವವರಿಗೆ ನೋಂದಣಿಯನ್ನು ಬರುವ ಏಪ್ರಿಲ್​ 1ರಿಂದ ಆರಂಭಿಸಲಾಗುತ್ತಿದೆ. ಕಣಿವೆಯಲ್ಲಿ ಭಯೋತ್ಪಾದಕ ಕೃತ್ಯದ ಹಿನ್ನೆಲೆಯಲ್ಲಿ ಅಮರನಾಥ ಅಮರನಾಥ ಯಾತ್ರಿಕರು ಆದಷ್ಟು ಬೇಗ ಕಾಶ್ಮೀರದಿಂದ ಹೊರಹೋಗುವಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತವು 2019 ರ ಆಗಸ್ಟ್ 2 ರಂದು ಭದ್ರತಾ ಸಲಹೆಯನ್ನು ನೀಡಿತ್ತು. ಅದರ ಆಧಾರದ ಮೇಲೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಜಗನ್ನಾಥ ಯಾತ್ರೆ ಕೂಡ ಆರಂಭ:

ಜೂನ್ 23 ರಿಂದ ಜಗನ್ನಾಥ ಯಾತ್ರೆ ಕೂಡ ಪ್ರಾರಂಭವಾಗಲಿದೆ. ಆಗಸ್ಟ್ 3 ರಂದು ಸಾವನ್ ಪೂರ್ಣಿಮಾ (ರಕ್ಷಾ ಬಂಧನ್) ದಿನದಂದು ಯಾತ್ರೆ ಕೊನೆಗೊಳ್ಳುತ್ತದೆ. 2019 ರಲ್ಲಿ ಸೀಮಿತ ಸಂಖ್ಯೆಯ ಯಾತ್ರಿಗಳ ಆನ್‌ಲೈನ್ ನೋಂದಣಿಯ ಪ್ರಾಯೋಗಿಕ ಯೋಜನೆಯ ಯಶಸ್ಸನ್ನು ಪರಿಗಣಿಸಿ ಮಂಡಳಿಯು ಆನ್‌ಲೈನ್ ನೋಂದಣಿಯ ಕೋಟಾವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.

13 ವರ್ಷಕ್ಕಿಂತ ಕಡಿಮೆ ಮತ್ತು 75 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಗೆ ತೀರ್ಥಯಾತ್ರೆ ಮಾಡಲು ಅನುಮತಿ ನೀಡಲಾಗುವುದಿಲ್ಲ. ಯಾತ್ರೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್- http://www.Shriamarnathjishrine.com ನಲ್ಲಿ ನೋಡಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net