

ಏರ್ ಇಂಡಿಯಾ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಎಐ ಕಾರ್ಗೋ ಲಾಜಿಸ್ಟಿಕ್ ಆ್ಯಂಡ್ ಅಲೈಡ್ ಸವಿರ್ಸ್ ಕಂಪನಿ ಲಿಮಿಟೆಡ್ನ ವಿವಿಧ ಸ್ಟೇಷನ್ಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್ನ (ಬಿಇಸಿಐಎಲ್) ಮೂಲಕ ಭರ್ತಿ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳು ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ.
ಹುದ್ದೆ ವಿವರ
* ಹ್ಯಾಂಡಿಮ್ಯಾನ್/ ಲೋಡರ್ - 73
* ಸೂಪರ್ವೈಸರ್ - 26
* ಸೀನಿಯರ್ ಸೂಪರ್ವೈಸರ್ - 4
ವಿದ್ಯಾರ್ಹತೆ: ಲೋಡರ್ ಕೆಲಸಕ್ಕೆ 8ನೇ ತರಗತಿ, ಸೂಪರ್ವೈಸರ್ ಆಗಲು ಪದವಿ ಮಾಡಿದ್ದು, ಕಂಪ್ಯೂಟರ್ ಜ್ಞಾನ ಅವಶ್ಯ. ಜತೆಗೆ ಹಿಂದಿ ಭಾಷಾ ಜ್ಞಾನ ಅವಶ್ಯ. ಎಲ್ಲ ಹುದ್ದೆಗೂ ಕನಿಷ್ಠ 1 ವರ್ಷದ ವೃತ್ತಿ ಅನುಭವ ಕೇಳಲಾಗಿದೆ.
ವಯೋಮಿತಿ: ಲೋಡರ್ ಕೆಲಸಕ್ಕೆ ಗರಿಷ್ಠ 45 ವರ್ಷ, ಸೂಪರ್ವೈಸರ್ ಹುದ್ದೆಗೆ ಗರಿಷ್ಠ 30 ವರ್ಷ, ಸೀ.ಸೂಪರ್ವೈಸರ್ ಹುದ್ದೆಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಎಲ್ಲೆಲ್ಲಿ ನೇಮಕಾತಿ: ಅಮೃತ್ಸರ್ 14, ಇಂದೋರ್ 56, ರಾಜ್ಮಂಡ್ರಿ 2, ಡೆಹ್ರಾಡೂನ್ 14, ತಿರುಪತಿಯಲ್ಲಿ 17 ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ವೇತನ: ಲೋಡರ್ ಹುದ್ದೆಗೆ ಮಾಸಿಕ 14,014 ರೂ., ಸೂಪರ್ವೈಸರ್ ಹುದ್ದೆಗೆ 18,564 ರೂ., ಸೀ.ಸೂಪರ್ವೈಸರ್ ಹುದ್ದೆಗೆ ಮಾಸಿಕ 20,384 ರೂ. ವೇತನ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ: ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಮಹಿಳಾ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 750 ರೂ. (ಪ್ರತಿ ಪ್ರತ್ಯೇಕ ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ 500ರೂ. ಪ್ರತ್ಯೇಕವಾಗಿ ಪಾವತಿಸಬೇಕು), ಎಸ್ಸಿ, ಎಸ್ಟಿ, ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 450 ರೂ. (ಇನ್ನೊಂದು ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ 300ರೂ. ಪ್ರತ್ಯೇಕ).
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಪರೀಕ್ಷೆಗಳ ದಿನಾಂಕವನ್ನು ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಮೇಲ್ ಅಥವಾ ಸಂದೇಶ ಮೂಲಕ ತಿಳಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 30.6.2021
ಅಧಿಸೂಚನೆಗೆ: https://bit.ly/3wKBvet
ಮಾಹಿತಿಗೆ: http://www.becil.com