ವಿಡಿಯೋಕ್ಕೆ ಸಹಿ ಹಾಕಿಸಿಕೊಂಡ್ರು, ಲೈಫ್‌ ಹಾಳು ಮಾಡಿದ್ರು: ಶಿಲ್ಪಾ ವಿರುದ್ಧ 50 ಕೋಟಿ ರೂ. ಪರಿಹಾರಕ್ಕೆ ನಟಿ ಶೆರ್ಲಿನ್‌ ಕೇಸ್‌

sherlyn
Published on

ಮುಂಬೈ: ಪೋರ್ನ್‌ ವಿಡಿಯೋ ಕೇಸ್‌ನಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸಿಲುಕಿ ಒದ್ದಾಡುತ್ತಿರುವ ನಡುವೆಯೇ ಈ ಕೇಸ್‌ಗೆ ಸಂಬಂಧಿಸಿದಂತೆ ಇನ್ನೂ ಗುದ್ದಾಟ ಮುಂದುವರೆಯುತ್ತಲೇ ಇದೆ. ತನ್ನ ಮೇಲೆ ಅತ್ಯಾಚಾರ ಎಸಗಲು ಬಂದು ನನ್ನ ಕರೀಯರ್‌ ರಾಜ್‌ ಕುಂದ್ರಾ ಹಾಳು ಮಾಡಿದ್ದಾರೆ ಎಂದು ಆರೋಪಿಸಿರುವ ನಟಿ ಶೆರ್ಲಿನ್‌ ಚೋಪ್ರಾ ಇದೀಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ.

ಶೆರ್ಲಿನ್‌ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಶಿಲ್ಪಾ ಶೆಟ್ಟಿ ವಾಗ್ದಾಳಿ ನಡೆಸಿದ್ದರು, ಜತೆಗೆ ಆಕೆಯಿಂದಲೇ ತಮಗೆ ಅನ್ಯಾಯ ಆಗಿರುವುದಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ 50 ಕೋಟಿ ರೂಪಾಯಿ ಪರಿಹಾರ ನೀಡಲು ಆದೇಶಿಸಬೇಕು ಎಂದು ಶೆರ್ಲಿನ್‌ ವಿರುದ್ಧ ಕೇಸ್‌ ದಾಖಲಿಸಿದ್ದರು. ಇದೀಗ ಇದಕ್ಕೆ ತಿರುಗೇಟು ನೀಡಿರುವ ಶೆರ್ಲಿನ್‌ ಶಿಲ್ಪಾ ಶೆಟ್ಟಿ ಮತ್ತು ರಾಜ್‌ಕುಂದ್ರಾ ವಿರುದ್ಧವೇ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. 75 ಕೋಟಿ ರೂಪಾಯಿ ಪರಿಹಾರ ನೀಡಲು ಆದೇಶಿಸಬೇಕು ಎಂದು ಕೇಸ್‌ ಹಾಕಿದ್ದಾರೆ!

‘ಶಿಲ್ಪಾ ಶೆಟ್ಟಿ ಮತ್ತು ಕುಂದ್ರಾ ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಭೂಗತ ಜಗತ್ತಿನ ಬೆದರಿಕೆ ಹಾಕಿದ್ದಾರೆ. ಶಿಲ್ಪಾ ಶೆಟ್ಟಿ ನನಗೆ ಕುಂದ್ರಾ ಜೊತೆ ಒಪ್ಪಂದಕ್ಕೆ ಸಹಿ ಹಾಕುವಂತೆ ಆಮಿಷವೊಡ್ಡಿದ್ದರು. ಇದರಿಂದ ನನ್ನ ವೃತ್ತಿ ಜೀವನ ಹಾಳಾಗಿದೆ. ಮೂರು ವಿಡಿಯೋಗಳನ್ನು ಚಿತ್ರೀಕರಿಸಿದ್ದು, ಇದುವರೆಗೂ ಹಣ ನೀಡಲಿಲ್ಲ’ ಎಂದು ಶೆರ್ಲಿನ್‌ ಹೇಳಿದ್ದಾರೆ.

ಇದನ್ನು ಉಲ್ಲೇಖಿಸಿ ಇದಾಗಲೇ ದಂಪತಿಗೆ ಶೆರ್ಲಿನ್‌ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ. ಮಾನಸಿಕವಾಗಿ ಕಿರುಕುಳ ನೀಡಿದ್ದಕ್ಕಾಗಿ 75 ಕೋಟಿ ರೂ. ನೀಡುವಂತೆ ಕೇಸ್‌ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net