

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ, ಎರಡು ಮುದ್ದು ಮಕ್ಕಳ ಅಮ್ಮ ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಗುವೊಂದರ ಚಿತ್ರವನ್ನು ಶೇರ್ ಮಾಡಿಕೊಂಡಿದ್ದು, ಮತ್ತೊಂದು ಮಗುವನ್ನು ಪಂಡಿತ್ ಕುಟುಂಬಕ್ಕೆ ಪರಿಚಯಿಸುತ್ತಿದ್ದೇನೆ ಎಂದಿದ್ದಾರೆ.
ಮುದ್ದಾದ ನಾಲ್ಕು ತಿಂಗಳ ಮಗುವಿನ ಫೋಟೋ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡು ಅವರು ಇದು ಪಂಡಿತ್ ಕುಟುಂಬದ ಹೊಸ ಸದಸ್ಯ ಎಂದು ಬರೆದುಕೊಂಡಿದ್ದಾರೆ. ಇದಾಗಲೇ ಐರಾ, ಯಥರ್ವ ಎಂಬ ಎರಡು ಮಕ್ಕಳ ತಾಯಿಯಾಗಿರುವ ರಾಧಿಕಾ, ಮತ್ತೊಂದು ಮಗುವಿನ ಫೋಟೋ ಹಾಗೂ ಅವರು ನೀಡಿರುವ ಕ್ಯಾಪ್ಷನ್ ನೋಡಿದ ತಕ್ಷಣ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಆದರೆ ಅಲ್ಲಿಯೇ ರಾಧಿಕಾ ಅವರು, ಈ ಮಗು ಯಾರದ್ದು ಎಂಬ ಬಗ್ಗೆಯೂ ಉಲ್ಲೇಖಿಸಿದ್ದು, ಇದು ತಮ್ಮ ಸಹೋದರ ಗೌರಂಗ್ ಪಂಡಿತ್ ಮತ್ತು ಪತ್ನಿ ಸಹನಾ ದಂಪತಿಗೆ ಮುದ್ದಾದ ಗಂಡು ಮಗು ಎಂದು ಹೇಳಿದ್ದಾರೆ. ಇದಾಗಲೇ ಈ ದಂಪತಿಗೆ ಒಂದು ಮಗುವಿದ್ದು, ಇದು ಎರಡನೆಯ ಮಗುವಾಗಿದೆ.
ಗೌರಂಗ್ ಪಂಡಿತ್ ಮತ್ತು ಪತ್ನಿ ಸಹನಾ ದಂಪತಿ ವಿದೇಶದಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಮಗುವಿನ ತೊಟ್ಟಿಲು ಶಾಸ್ತ್ರವನ್ನು ವಿದೇಶದಲ್ಲಿಯೇ ಮಾಡಿದ್ದು, ಆ ವೀಡಿಯೋವನ್ನು ಸಹನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.