

ಮುಂಬೈ: ಸಿನಿಪ್ರಿಯರ ನೆಚ್ಚಿನ ಕಾಫಿ ವಿತ್ ಕರಣ್ ಷೋ ಪುನಃ ಆರಂಭವಾಗುತ್ತಿದೆ. ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಈ ಷೋನ ಆರು ಸೀಸನ್ ಇದಾಗಲೇ ಮುಗಿದಿದ್ದು, ಇದು 7ನೇ ಸೀಸನ್. ಆದರೆ ಈ ಬಾರಿಯ ವಿಶೇಷತೆ ಎಂದರೆ ಪ್ರತಿಸಲವೂ ಈ ಷೋ ಟಿ.ವಿಯಲ್ಲಿ ಬರುತ್ತಿತ್ತು. ಆದರೆ ಇದೀಗ ಓಟಿಟಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಡಿಸ್ನಿ ಫ್ಲಸ್ ಹಾಸ್ಟ್ಸ್ಟಾರ್ನಲ್ಲಿ 7ನೇ ಸೀಸನ್ ನಾಳೆ (ಜುಲೈ 7ರಿಂದ) ಪ್ರಸಾರವಾಗಲಿದೆ.
ಏಳನೆ ಸೀಸನ್ನ ಮೊದಲ ಎಪಿಸೋಡ್ನಲ್ಲಿ ಈಚೆಗಷ್ಟೇ ಮದುವೆಯಾಗಿರುವ ಹಾಟ್ ಬಾಲಿವುಡ್ ಜೋಡಿಗಳಾದ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಅತಿಥಿಗಳು. ಇವರ ಸಂದರ್ಶನ ಇದಾಗಲೇ ಮಾಡಲಾಗಿದ್ದು, ಕರಣ್ ಜೋಹರ್ ವಿಶೇಷ ಪ್ರೋಮೋವನ್ನು ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಪ್ರೋಮೋದಲ್ಲಿ ಕೆಲವೊಂದು ಪ್ರಶ್ನೆಗಳನ್ನು ಕರಣ್, ರಣಬೀರ್ ಹಾಗೂ ಆಲಿಯಾ ದಂಪತಿಗೆ ಕೇಳಿದ್ದಾರೆ. ಅದರಲ್ಲಿ ಒಂದು ಫಸ್ಟ್ನೈಟ್ಗೆ (ಸುಹಾಗ್ರಾತ್) ಸಂಬಂಧಿಸಿದ್ದು, ಫಟಾಫಟ್ ಎಂದು ಉತ್ತರಿಸಿದ ಆಲಿಯಾ ಹೇಳಿರುವ ಹೇಳಿಕೆ ಇದೀಗ ಭಾರಿ ವೈರಲ್ ಆಗಿದೆ.
ಈ ಕಾರ್ಯಕ್ರಮದಲ್ಲಿ ಅನೇಕ ರೌಂಡ್ಸ್ಗಳಿವೆ. ಅದರಲ್ಲಿ ಒಂದು ರ್ಯಾಪಿಡ್ ಫೈಯರ್ ರೌಂಡ್. ಕರಣ್ ಕೇಳುವ ಪ್ರಶ್ನೆಗೆ ಇಬ್ಬರೂ ಫಟಾಫಟ್ ಎಂದು ಉತ್ತರಿಸಬೇಕು. ಈ ರೌಂಡ್ಸ್ನಲ್ಲಿ ಕರಣ್ ಅಲಿಯಾಗೆ ‘ಮದುವೆಯ ನಂತರ ನಿಮಗೆ ಅರ್ಥವಾದ ಒಂದು ವಿಚಾರ ಯಾವುದು ಎಂದು ತಿಳಿಸಿ‘ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಆಲಿಯಾ, ‘ಮೊದಲ ರಾತ್ರಿ ಎನ್ನುವುದೇ ಇರುವುದಿಲ್ಲ. ನೀವು ಮದುವೆಯ ದಿನ ಸುಸ್ತಾಗಿರುತ್ತೀರಿ‘ ಎಂದು ಹೇಳಿದ್ದಾರೆ. ಇದಕ್ಕೆ ಕರಣ್ ಮತ್ತು ರಣಬೀರ್ ಬಿದ್ದು ಬಿದ್ದು ನಕ್ಕಿದ್ದಾರೆ. ಇದರ ಪ್ರೋಮೋ ಇದೀಗ ಬಿಡುಗಡೆಯಾಗಿದೆ.
ಸದ್ಯ ಈ ಜೋಡಿ ಇದೇ ಕರಣ್ ಜೋಹರ್ ನಿರ್ದೇಶಿಸುತ್ತಿರುವ ‘ರಾಕಿ ಔರ್ ರಾಣಿ ಪ್ರೇಮ್ ಕಹಾನಿ‘ ಚಿತ್ರದಲ್ಲಿ ನಟಿಸುತ್ತಿದ್ದಾರೆ.