

ನವದೆಹಲಿ: ನನಗೂ ಒಳ್ಳೆಯ ಚಿಕಿತ್ಸೆ ದೊರೆತಿದ್ದರೆ ನಾನೂ ಬದುಕುತ್ತಿದ್ದೆ. ಈಗ ಯಾವ ಭರವಸೆಯೂ ಇಲ್ಲ. ಮತ್ತೆ ಹುಟ್ಟಿ ಬರುವೆ, ಒಳ್ಳೆಯ ಕೆಲಸ ಮಾಡುವೆ, ಇತಿ ನಿಮ್ಮ ರಾಹುಲ್ ವೊಹ್ರಾ...
ಇನ್ನೇನು ಉಸಿರು ನಿಲ್ಲುತ್ತದೆ, ಸಾವು ಕಣ್ಣೆದುರಿಗೇ ನಿಂತಿದೆ, ಬದುಕುವ ಸಾಧ್ಯವೇ ಇಲ್ಲ ಎಂದು ಅರಿತ ಚಿತ್ರನಟ ರಾಹುಲ್ ವೊಹ್ರಾ (35) ಬರೆದಿರುವ ಕೊನೆಯ ಸಾಲುಗಳಿವು, ಇದನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾರೆ.
ಕರೊನಾ ಸೋಂಕು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ರಾಹುಲ್ ಅವರನ್ನು ದೆಹಲಿಯ ತೆಹರೀಪುರದಲ್ಲಿರುವ ರಾಜೀವ್‌ಗಾಂಧಿ ಸೂಪರ್‌ಸ್ಪೆಷ್ಯಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತಮಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎನ್ನುವುದು ರಾಹುಲ್ ಅವರ ಅಳಲಾಗಿತ್ತು ಎಂದು ಅವರು ಬರೆದುಕೊಂಡ ಈ ಸಾಲುಗಳು ಹೇಳುತ್ತಿವೆ.