ಡೇಟಿಂಗ್​ ಮಾಡಿ ಪ್ರೀತಿ ರಿಜೆಕ್ಟ್​ ಮಾಡಿದ್ಲು: ಭಗ್ನ ಪ್ರೇಮಿಯಿಂದ ಹೀಗೊಂದು ಟ್ಯಾಟೂ ಸೇಡು!

tatoo
Published on

ಸಾವೊಪೌಲೊ (ಬ್ರೆಜಿಲ್)​: ಪ್ರೀತಿಸಿ ಕೈಕೊಟ್ಟ ಮಾಜಿ ಪ್ರಿಯತಮೆಯ ಕ್ರಮಕ್ಕೆ ಕೆಂಡಾಮಂಡಲನಾದ ಪ್ರೇಮಿಯೊಬ್ಬ ಆಕೆಯನ್ನು ಅಪಹರಿಸಿ ಮುಖದ ಮೇಲೆ ತನ್ನ ಹೆಸರನ್ನು ಹಚ್ಚೆ ಹಾಕಿಸಿ ಸೇಡು ತೀರಿಸಿಕೊಂಡಿರುವ ಭಯಾನಕ ಘಟನೆ ಬ್ರೆಜಿಲ್ನ ಸಾವೊಪೌಲೊ​ನಲ್ಲಿ ನಡೆದಿದೆ.

ಗೆಬ್ರಿಯಲ್ ಕೋಯೆಲ್ಹೋ ಎಂಬ 20 ವರ್ಷದ ಯುವಕ ತನ್ನ 18 ವರ್ಷದ ಮಾಜಿ ಪ್ರೇಯಸಿ ತಯೋನೆ ಕಾಲ್ಡಾಸ್ ವಿರುದ್ಧ ಈ ರೀತಿ ಸೇಡು ತೀರಿಸಿಕೊಂಡಿದ್ದಾರೆ. ಇವರಿಬ್ಬರು ಕೆಲ ವರ್ಷ ಒಟ್ಟಿಗೇ ಇದ್ದರು. ಡೇಟಿಂಗ್​ ಕೂಡ ಮಾಡುತ್ತಿದ್ದರು. ಆದರೆ ಇಬ್ಬರ ನಡುವೆ ಜಗಳವಾಗಿ ದೂರವಾಗಿದ್ದರು.

ಪ್ರೇಯಸಿ ತನ್ನಿಂದ ದೂರವಾದದ್ದನ್ನು ಸಹಿಸಿಕೊಳ್ಳದ ಗೆಬ್ರಿಯಲ್ ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಲು ಹೊಂಚುಹಾಕಿದ್ದಾನೆ. ನಂತರ ಆಗಾಗ ಕಾಲೇಜಿಗೆ ಬಂದು ಕಿರುಕುಳ ನೀಡಲು ಶುರು ಮಾಡಿದ್ದ. ತನ್ನಿಂದ ದೂರವಾಗಬೇಡ ಎಂದು ಗೋಗರೆಯುತ್ತಿದ್ದ. ಆದರೆ ಯುವತಿ ಮಾತ್ರ ಯಾವುದಕ್ಕೂ ಕ್ಯಾರೇ ಅಂದಿರಲಿಲ್ಲ.

ಅದಕ್ಕಾಗಿ ಯುವಕ ಆಕೆಯನ್ನು ಅಪಹರಿಸಿಕೊಂಡು ಹೋಗಿದ್ದಾನೆ. ನಂತರ ಶಾಶ್ವತವಾಗಿ ತನ್ನ ಹೆಸರು ಆಕೆಯ ಮುಖದಲ್ಲಿ ಇರುವಂತೆ ತನ್ನ ಹೆಸರಿನ ಟ್ಯಾಟೂ ಹಾಕಿಸಿದ್ದಾನೆ. ತನ್ನನ್ನು ಬಲವಂತವಾಗಿ ಅಪಹರಿಸಿ ಮನೆಗೆ ಕರೆದೊಯ್ದು ಆತ ನನ್ನ ಮುಖವನ್ನು ವಿಕಾರ ಮಾಡಿದ್ದಾನೆ ಎಂದು ಆಕೆ ದೂರಿದ್ದಾಳೆ. ಆದರೆ, ಈಕೆಯ ಅಪವಾದವನ್ನು ಗೇಬ್ರಿಯಲ್​ನ ಮನೆಯವರು ತಳ್ಳಿಹಾಕಿದ್ದಾರೆ. ಹುಡುಗಿಯೇ ಇಷ್ಟಪಟ್ಟು ಟ್ಯಾಟೂ ಹಾಕಿಸಿಕೊಂಡಿದ್ದಾಳೆ ಎಂದಿದ್ದಾರೆ.

ಸದ್ಯ ಯುವಕನನ್ನು ಬಂಧಿಸಲಾಗಿದೆ. ಕೆಲವರು ಹೀಗೆ ಪ್ರೀತಿಸಿ ಕೈಕೊಟ್ಟವರಿಗೆ ಹೀಗೆಯೇ ಶಿಕ್ಷೆ ಆಗಬೇಕು ಎಂದಿದ್ದರೆ, ಹಲವರು ಯುವತಿಯ ಪರ ವಹಿಸಿಕೊಮಡಿದ್ದಾರೆ. ಈ ವಿಷಯ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಪರ-ವಿರೋಧ ಕಮೆಂಟ್​ಗಳು ಬರುತ್ತಿವೆ.

ಟ್ಯಾಟೂ ಹಾಕುವಾಗ ತುಂಬಾ ನೋವಾಗುತ್ತದೆ. ಅದರಲ್ಲಿಯೂ ಈಕೆಗೆ ಮುಖದ ಮೇಲೆ ಅದನ್ನು ಹಾಕಲಾಗಿದೆ. ಇದು ತುಂಬಾ ನೋವಿನ ಸಂಗತಿ. ಆಕೆಯ ಮುಖದ ಮೇಲಿನ ಟ್ಯಾಟೂವನ್ನು ಲೇಸರ್​ನಿಂದ ಅಳಿಸಿ ಹಾಕುತ್ತೇವೆ ಎಂದು ಹಲವು ಟ್ಯಾಟೂ ಕಲಾವಿದರೂ ಮುಂದೆ ಬಂದಿದ್ದಾರೆ. ಲೇಸರ್​ ಚಿಕಿತ್ಸೆಯಿಂದ ಅಳಿಸಿ ಹಾಕುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net