ಕೇಂದ್ರ ಸರ್ಕಾರದ ನೌಕರಿಗಾಗಿ ಹುಡುಕಾಟ ನಡೆಸಿರುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌: 87 ಹುದ್ದೆಗಳಿಗೆ ಆಹ್ವಾನ

job-UPSC
Published on

ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್​ಸಿ) ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿನ ಹಲವು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು ಹುದ್ದೆಗಳು: 87

ಸಂಸ್ಕೃತಿ ಸಚಿವಾಲಯದಲ್ಲಿ 1, ಹಣಕಾಸು ಸಚಿವಾಲಯದಲ್ಲಿ 20, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದಲ್ಲಿ 2, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಲ್ಲಿ 11, ಗೃಹ ವ್ಯವಹಾರಗಳ ಸಚಿವಾಲಯದಲ್ಲಿ 2, ಗಣಿ ಸಚಿವಾಲಯದಲ್ಲಿ 41, ಬುಡಕಟ್ಟು ವ್ಯವಹಾರಗಳ ಸಚಿವಾಲಯದಲ್ಲಿ 1 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಯ್ಕೆಯಾಗುವ ಅಭ್ಯರ್ಥಿಗಳನ್ನು ದೇಶದ ಯಾವುದೇ ಭಾಗಕ್ಕೆ ಬೇಕಾದರೂ ನೇಮಕ ಮಾಡಬಹುದಾಗದೆ. ನೇಮಕಾತಿ ಪರೀಕ್ಷೆ/ ಸಂದರ್ಶನ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 25 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. 7ನೇ ವೇತನ ಆಯೋಗದ ಅನ್ವಯ 7, 10, 11ನೇ ಹಂತ ವೇತನವನ್ನು ಹುದ್ದೆಗಳಿಗೆ ಅನುಗುಣವಾಗಿ ನೀಡಲಾಗುವುದು.

ಹುದ್ದೆ ವಿವರ

* ಜೂನಿಯರ್ ಮೈನಿಂಗ್ ಜಿಯಾಲಜಿಸ್ಟ್ - 36

* ಅಸಿಸ್ಟೆಂಟ್ ಪ್ರೊಫೆಸರ್ (ಆಯುರ್ವೆದ, ಬಾಲ ರೋಗ-1, ಆಯುರ್ವೆದ, ಕಾಯ ಚಿಕಿತ್ಸಾ-4, ಆಯುರ್ವೆದ, ಕ್ರಿಯಾ ಶರೀರ್-2) - 7

* ರಿಸರ್ಚ್ ಆಫೀಸರ್ -1

* ಅಸಿಸ್ಟೆಂಟ್ ಡೈರೆಕ್ಟರ್ (ಕಾಸ್ಟ್) - 16

* ಕೆಮಿಸ್ಟ್ - 5

* ಎಕನಾಮಿಕ್ ಆಫೀಸರ್ - 4

* ಅಡ್ಮಿನಿಸ್ಟ್ರೇಟೀವ್ ಆಫೀಸರ್ - 1

* ಮೆಕಾನಿಕಲ್ ಮರೈನ್ ಇಂಜಿನಿಯರ್ - 1

* ಪ್ರಾಧ್ಯಾಪಕ (ಆಕ್ಯುಪೇಷನಲ್ ಥೆರಪಿ) - 4

* ಸೈಂಟಿಸ್ಟ್ ಬಿ (ಡಾಕ್ಯುಮೆಂಟ್ಸ್) - 2

* ಅಸಿಸ್ಟೆಂಟ್ ಎಡಿಟರ್ (ಒರಿಯಾ) - 1

ವಿದ್ಯಾರ್ಹತೆ: ಹುದ್ದೆಗೆ ಅನುಗುಣವಾಗಿ ಯಾವುದೇ ಪದವಿ, ಮೆಕಾನಿಕಲ್/ ಮರೈನ್/ ಆಟೋಮೊಬೈಲ್ ಇಂಜಿನಿಯರಿಂಗ್, ಆಯುರ್ವೆದ ಮೆಡಿಸಿನ್​ನಲ್ಲಿ ಪದವಿ, ಆಕ್ಯುಪೇಷನಲ್ ಥೆರಪಿ, ಕೆಮಿಸ್ಟ್ರಿ, ಜಿಯಾಲಜಿ/ ಅಪ್ಲೈಲ್ಡ್ ಜಿಯಾಲಜಿ, ಸೋಷಿಯಾಲಜಿ/ ಗಣಿತಶಾಸ್ತ್ರ/ ಸೋಷಿಯಲ್ ವರ್ಕ್/ ಆಂಥ್ರೋಪಾಲಜಿ/ ಸ್ಟ್ಯಾಟಿಸ್ಟಿಕ್ಸ್, ಅರ್ಥಶಾಸ್ತ್ರ/ ಅರ್ಥಶಾಸ್ತ್ರ ವ್ಯವಹಾರದಲ್ಲಿ ಸ್ನಾತಕೋತ್ತರ ಪದವಿ, ಸಿಎ (ಐಸಿಎನಲ್ಲಿ ಸದಸ್ಯರಾಗಿರಬೇಕು) ಪದವಿ ಪಡೆದಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ವೃತ್ತಿ ಅನುಭವ ಕೇಳಲಾಗಿದೆ.

ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30 ರಿಂದ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 27.1.2022

ಅಧಿಸೂಚನೆಗೆ: https://bit.ly/33xPMS6

ಮಾಹಿತಿಗೆ: http://www.upsc.gov.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net