

ಅಮೃತಸರ: ಕರೊನಾ ಅದೆಷ್ಟೋ ಮಂದಿಯ ಉದ್ಯೋಗ ಕಸಿದುಕೊಂಡಿದೆ ಎನ್ನುವುದು ನಿಜ. ಉದ್ಯೋಗ ಕಳೆದುಕೊಂಡು ಹಲವಾರು ಮಂದಿ ಬೀದಿಗೆ ಬಂದಿದ್ದಾರೆ. ಮಾಡಲು ಕೆಲಸ ಇಲ್ಲವೆಂದು ಗೋಳೋ ಎನ್ನುತ್ತಿರುವವರೇ ಹಲವು ಮಂದಿ.
ಆದರೆ ಈ ವಿಡಿಯೋ ಒಮ್ಮೆ ನೋಡಿಬಿಡಿ. ಪಂಜಾಬ್ನ ಅಮೃತಸರದ ಈ ಅಜ್ಜಿಯ ವಯಸ್ಸು 80. ಮನೆಯಲ್ಲಿ ದುಡಿಯುವವರು ಯಾರೂ ಇಲ್ಲ ಎಂದು ಅಳುತ್ತಾ ಕುಳಿತುಕೊಳ್ಳದ ಈ ಅಜ್ಜಿ, ಈ ಇಳಿ ವಯಸ್ಸಿನಲ್ಲಿಯೂ ಜ್ಯೂಸ್ ಅಂಗಡಿ ತೆರೆದಿದ್ದಾರೆ. ಬಂದವರಿಗೆ ಜ್ಯೂಸ್ ಮಾಡಿ ಕೊಡುತ್ತಿದ್ದಾರೆ.
ಇದನ್ನು ಪತ್ರಕರ್ತ ಆರಿಫ್ ಷಾ ಎನ್ನುವವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಅಜ್ಜಿಯ ಕಾರ್ಯಕ್ಕೆ ಅನೇಕ ಮಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಈಕೆಯ ನೆರವಿಗೆ ನೆಟ್ಟಿಗರು ಮುಂದಾಗಿದ್ದಾರೆ. ಗೂಗಲ್ ಮ್ಯಾಪ್ನಲ್ಲಿ ನಿಖರವಾದ ಸ್ಥಳವನ್ನು ಹಂಚಿಕೊಂಡಿರುವ ಕಾರಣ, ದೇಶದ ವಿವಿಧ ಮೂಲೆಗಳಿಂದ ಜನರು ಈಕೆಯ ನೆರವಿಗೆ ಧಾವಿಸಿದ್ದಾರೆ. ಈಕೆ ಇಂದಿನ ಯುವಕರಿಗೆ ಮಾದರಿ.
ನೀವೂ ನೋಡಿ ಅಜ್ಜಿಯ ವಿಡಿಯೋ