ವಿಭಿನ್ನ ಪ್ರೇಮ್​ ಕಹಾನಿ! 80 ವರ್ಷದ ಅಜ್ಜ, 84ರ ಅಜ್ಜಿಯ ಜತೆ ಓಡಿಹೋಗಿ ಸಿಕ್ಕಬಿದ್ದ... ನಂತರ ಆದದ್ದು ದುರಂತ

lovestory
Published on

ಆಸ್ಟ್ರೇಲಿಯಾ: ಪ್ರೀತಿಗೆ ವಯಸ್ಸಲ್ಲ, ಮನಸ್ಸು ಮುಖ್ಯ ಎನ್ನುವುದು ತೀರಾ ಹಳೆದ ನಾಣ್ಣುಡಿ. ಅದಕ್ಕೆ ಪುಷ್ಪಿ ನೀಡಲು ಎಂಬಂತೆ ಇಲ್ಲೊಂದು ವಿಭಿನ್ನವಾಗಿರುವ ಲವ್​ ಸ್ಟೋರಿ ನಡೆದಿದೆ. ಇದು 80 ವರ್ಷದ ಅಜ್ಜ ಹಾಗೂ 84 ವರ್ಷದ ಅಜ್ಜಿಯ ಕಥೆ. ಓಡಿ ಹೋಗಿ ಸಿಕ್ಕಿಬಿದ್ದ ಈ ಜೋಡಿಯ ಕಥೆ ಏನು ನೋಡಿ...

ಆಸ್ಟ್ರೇಲಿಯಾದ ನಿವಾಸಿ ರಾಲ್ಫ್ ಗಿಬ್ಸ್ ಎಂಬ 80 ವರ್ಷದ ವ್ಯಕ್ತಿ ಬಹಳ ವರ್ಷಗಳಿಂದಲೂ ಕರೋಲ್​ ಲಿಸ್ಲೆ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಆದರೆ ಕೆಲ ಕಾರಣಗಳಿಂದ ಇವರಿಬ್ಬರೂ ಮದುವೆಯಾಗಲು ಸಾಧ್ಯವಾಗಿರಲಿಲ್ಲ.

ಈ ನಡುವೆ, ಲಿಸ್ಲೆ, ವಯೋಸಹಜವಾಗಿ ಅನಾರೋಗ್ಯದಿಂದ ಬಳಲುತ್ತಿದ್ದಳು. ಆಕೆಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಅವಳ ಜ್ಞಾಪಕ ಶಕ್ತಿಯು ದುರ್ಬಲವಾಗಿತ್ತು. ಆಕೆಯನ್ನು ಮನೆಯವರು ನರ್ಸಿಂಗ್ ಸೆಂಟರ್‌ಗೆ ದಾಖಲು ಮಾಡಿದ್ದರು. ಈ ವಿಷಯವು ರಾಲ್ಫ್ ಗಿಬ್ಸ್​ಗೆ ತಿಳಿಯಿತು. ತನ್ನ ಪ್ರೇಯಸಿ ಈ ರೀತಿ ತೊಂದರೆ ಪಡುತ್ತಿರುವುದನ್ನು ಅವರಿಗೆ ನೋಡಲು ಆಗಲಿಲ್ಲ.

ಅವರು ನರ್ಸಿಂಗ್ ಸೆಂಟರ್‌ಗೆ ಬಂದು ಪ್ರೇಯಸಿಯನ್ನು ಭೇಟಿಯಾದರು. ಆಕೆ ಕೂಡ ತನ್ನ ಪ್ರಿಯತಮನ ನೋಡಿ ಹಿರಿಹಿರಿ ಹಿಗ್ಗಿದರು. ಆದರೆ ನರ್ಸಿಂಗ್ ಸೆಂಟರ್‌ ನಿಯಮದ ಪ್ರಕಾರ ಅಲ್ಲಿಂದ ಹೊರಕ್ಕೆ ಹೋಗುವಂತಿರಲಿಲ್ಲ. ಅದಕ್ಕಾಗಿ ಪ್ಲ್ಯಾನ್​ ಮಾಡಿದ ಈ ಹಿರಿಯ ಜೀವ, ಅಲ್ಲಿಯವರ ಕಣ್ಣುತಪ್ಪಿಸಿ ಓಡಿ ಹೋದರು. ಕ್ವೀನ್​ಲ್ಯಾಂಡ್ ಕಡೆಗೆ ಇಬ್ಬರೂ ತಪ್ಪಿಸಿಕೊಂಡು ಹೋಗುವಾದ ನರ್ಸಿಂಗ್​ ಸೆಂಟರ್​ನಿಂದ ದೂರು ದಾಖಲಾಗಿತ್ತು. ಪೊಲೀಸರು ಈ ಜೋಡಿಯನ್ನು ಹಿಡಿದುಬಿಟ್ಟರು.

ರಾಲ್ಫ್ ಗಿಬ್ಸ್​ಗೆ ಅಪಹರಣದ ಆರೋಪದ ಮೇಲೆ ಏಳು ತಿಂಗಳ ಶಿಕ್ಷೆ ವಿಧಿಸಿದೆ. ಎರಡು ವರ್ಷ ಇಬ್ಬರೂ ಭೇಟಿಯಾಗಬಾರದು ಎಂದೂ ಹೇಳಿದೆ. ಆಕೆಯನ್ನು ಪುನಃ ನರ್ಸಿಂಗ್ ಸೆಂಟರ್‌ಗೆ ಕರೆದುಕೊಂಡು ಹೋಗಲಾಗಿದೆ. ಎಷ್ಟೋ ವರ್ಷಗಳ ಬಳಿಕ ಒಂದಾದ ಜೋಡಿ ಮತ್ತೆ ಬೇರೆ ಬೇರೆಯಾಗಿದ್ದು, ಪ್ರಿಯಕರ ಈ ವಯಸ್ಸಿನಲ್ಲಿ ಜೈಲು ಅನುಭವಿಸುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net