ಸಾವಿನ ಭೀಕರ ರೂಪ: ಮನೆಯೊಳಕ್ಕೆ ಟ್ರಕ್​ ನುಗ್ಗಿ ನಿವೃತ್ತ ಸಬ್​ಇನ್ಸ್​ಪೆಕ್ಟರ್​, ಪತ್ನಿ ಸೇರಿ ನಾಲ್ವರ ಸಾವು!

accidenet
Published on

ಮೈನಪುರಿ (ಉತ್ತರಪ್ರದೇಶ): ಮನೆಯೊಳಕ್ಕೆ ಏಕಾಏಕಿ ಟ್ರಕ್​ ನುಗ್ಗಿ ನಿವೃತ್ತ ಸಬ್‌ಇನ್‌ಸ್ಪೆಕ್ಟರ್, ಅವರ ಪತ್ನಿ ಸೇರಿದಂತೆ ನಾಲ್ವರು ಮೃತಪಟ್ಟಿರುವ ಭೀಕರ ಘಟನೆ ಉತ್ತರ ಪ್ರದೇಶದ ಮೈನಪುರಿಯಲ್ಲಿ ನಡೆದಿದೆ.

ಕುರವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿಟಿ ರಸ್ತೆಯಲ್ಲಿರುವ ಖಿರಿಯಾ ಪೀಪಲ್ ಗ್ರಾಮದ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಐವರು ಗಂಭೀರ ಗಾಯಗೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಮೈನ್‌ಪುರಿ ಎಸ್‌ಪಿ ಕಮಲೇಶ್ ದೀಕ್ಷಿತ್, ಟ್ರಕ್ ಚಾಲಕ ನಿಯಂತ್ರಣ ತಪ್ಪಿ ಮನೆಯೊಳಕ್ಕೆ ಟ್ರಕ್​ ನುಗ್ಗಿಸಿದ್ದಾನೆ. ಇದರಿಂದ ದುರ್ಘಟನೆ ಸಂಭವಿಸಿದೆ ಎಂದಿದ್ದಾರೆ. ನಿವೃತ್ತ ಸಬ್‌ಇನ್‌ಸ್ಪೆಕ್ಟರ್ ಮತ್ತು ಅವರ ಪತ್ನಿ, ಟ್ರಕ್‌ನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಮತ್ತೋರ್ವ ಅವಶೇಷಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಎಸ್​​ಪಿ ಹೇಳಿದ್ದಾರೆ.

ಸಾವು ಯಾವ ರೂಪದಲ್ಲಿ ಅಡಗಿರುತ್ತದೆಯೋ ಹೇಳಲಾಗದು. ವಾಹನ ಅಪಘಾತದಲ್ಲಿಯೇ ಸಾಯಬೇಕು ಎಂದು ವಿಧಿ ಬರೆದಿದ್ದರೆ ರಸ್ತೆಗೇ ಇಳಿಯಬೇಕೆಂದೇನೂ ಇಲ್ಲ, ಮನೆಯ ಒಳಗೇ ಇದ್ದರೂ ಸಾವು ಹುಡುಕಿಕೊಂಡು ಬರುತ್ತದೆ ಎನ್ನುವುದಕ್ಕೆ ಈ ಭೀಕರ ಘಟನೆಯೇ ಸಾಕ್ಷಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net