ಪತ್ನಿಯ ಮೇಲಿನ ಸೇಡಿಗೆ 16 ಮಂದಿಯ ರೇಪ್‌- ಮರ್ಡರ್‌! ‘ಆಗಂತುಕ’ ಸಿನಿಮಾ ನೆನಪಿಸುವ ಘಟನೆ

murder
Published on

ಹೈದರಾಬಾದ್: ನಟ ದೇವರಾಜ್‌ ಅಭಿನಯದ ಆಗಂತುಕ ಸಿನಿಮಾ ನೋಡಿದವರಿಗೆ ಮನುಷ್ಯನ ಮಾನಸಿಕ ಸಮಸ್ಯೆ ಬಗ್ಗೆ ಅರ್ಥವಾದೀತು. ತಾನು ಅತ್ಯಂತ ಪ್ರೀತಿಸಿದ ಪತ್ನಿಯನ್ನು ಪರಪುರಷನ ಜತೆ ಬೆಡ್‌ರೂಮ್‌ನಲ್ಲಿ ಬಹಳ ಖುಷಿಯಲ್ಲಿ ಇದ್ದುದನ್ನು ನೋಡಿದ ನಟ, ಎಲ್ಲಾ ಮಹಿಳೆಯರಲ್ಲಿಯೂ ತನ್ನ ಪತ್ನಿಯ ರೂಪವನ್ನೇ ನೋಡಿ ಕೊಲೆ ಮಾಡುತ್ತಾ ವಿಕೃತ ಆನಂದ ಅನುಭವಿಸುತ್ತಾನೆ.

ಇದೇ ಸಿನಿಮಾವನ್ನು ಹೋಲುವ ಭಯಾನಕ ಘಟನೆ ಹೈದರಾಬಾದ್‌ನ ರಾಚಕೊಂಡದಲ್ಲಿ ನಡೆದಿದೆ. ಮೈನಾ ರಾಮುಲು ಎಂಬಾತ 16 ಮಹಿಳೆಯರನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಎಲ್ಲರ ಮೇಲೂ ಮೊದಲು ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿದ್ದಾನೆ. ಇದೀಗ ಆತ ಹೈದರಾಬಾದ್​ ಟಾಸ್ಕ್ ಪೋರ್ಸ್ ಮತ್ತು ರಾಚಕೊಂಡ ಪೊಲೀಸರು ನಡೆಸಿದ ಜಂಟಿ ದಾಳಿಯ ಸಿಕ್ಕಿಬಿದ್ದಿದ್ದಾನೆ.

ಕೆಲವು ಮೃತದೇಹಗಳ ಗುರುತು ಸಿಗದ ಹಾಗೆ ವಿಕೃತವಾಗಿ ಕೊಲೆ ಮಾಡಿದ್ದ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಅಂಜನ್ ಕುಮಾರ್ ತಿಳಿಸಿದ್ದಾರೆ.

ಈತನ ಪತ್ನಿ ಪರಪುರುಷನ ಜತೆ ಓಡಿಹೋದದ್ದೇ ಇದಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಆಕೆಯ ಮೇಲಿನ ಸಿಟ್ಟಿನಲ್ಲಿ ಮನಸ್ಸು ವಿಕೃತಗೊಂಡು ಈ ರೀತಿ ಕೃತ್ಯಕ್ಕೆ ಇಳಿದಿದ್ದಾರೆ.

ದಿನಗೂಲಿ ನೌಕರಿ ಮಾಡುಕೊಂಡಿರುವ ಮೈನಾ ವಿರುದ್ಧ ಮೆದಕ್, ಸೈಬರ್​ಬಾದ್ ಮತ್ತು ರಾಚಕೊಂಡ ನಗರದಲ್ಲಿ ಕಳ್ಳತನ, ದರೋಡೆಗೆ ಸಂಬಂಧಿಸಿದಂತೆ 21 ಪ್ರಕರಣಗಳು ದಾಖಲಾಗಿದ್ದವು. ಒಂದು ಕೊಲೆ ಪ್ರಕರಣದಲ್ಲಿಯೂ ಸಿಕ್ಕಿಬಿದ್ದು ಜೀವಾವಧಿ ಶಿಕ್ಷೆಯಾಗಿತ್ತು. ನಂತರ ಕಳೆದ ವರ್ಷ ಜುಲೈ 31ರಂದು ಪರೋಲ್‌ ಮೇಲೆ ಬಿಡುಗಡೆಗೊಂಡಿದ್ದ. ಆದರೆ ಕೊಲೆ ಕೃತ್ಯವನ್ನು ಮುಂದುವರೆಸಿದ್ದ.

ವಿಪರೀತ ಕುಡಿತದ ದಾಸನಾಗಿದ್ದ ಈತ ಒಂಟಿ ಮಹಿಳೆಯರಿಗೆ ದುಡ್ಡು ಕೊಟ್ಟು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಈತನ ಬಣ್ಣದ ಮಾತುಗಳಿಗೆ ಒಳಗಾಗುವ ಮಹಿಳೆಯರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ. ದುಡ್ಡಿನ ಆಮಿಷ ತೋರಿಸಿ, ಮದ್ಯ ಕುಡಿಸಿ ಅವರ ಜತೆ ಸೆಕ್ಸ್‌ ಮಾಡಿ ನಂತರ ಕತ್ತು ಸೀಳಿ ಎಲ್ಲವೇ ಬಂಡೆ ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡುತ್ತಿದ್ದ. ನಂತರ ಅವರ ಬಳಿ ಇದ್ದ, ಹಣ- ಒಡವೆ ದೋಚಿ ಪರಾರಿಯಾಗುತ್ತಿದ್ದ.

ಸದ್ಯ 16 ಮಂದಿಯ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಇನ್ನಷ್ಟು ಪ್ರಕರಣೆ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net