ಮಗಳ ಮೇಲೆ ಅತ್ಯಾಚಾರ ಎಸಗಿದ್ದ ತಂದೆಗೆ 15 ವರ್ಷ ಜೈಲು

rape
Published on

ಬಾಂಡಾ (ಉತ್ತರ ಪ್ರದೇಶ): ತನ್ನ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ ತಂದೆ ಹಾಗೂ ಆತನ ಸಹೋದರನಿಗೆ ಉತ್ತರ ಪ್ರದೇಶ ಕೋರ್ಟ್ 15 ವರ್ಷ ಜೈಲು ಶಿಕ್ಷೆ ವಿಧಿಸಿದೆ.

2016ರ ಮಾರ್ಚ್​ 14ರಂದು ನಡೆದಿರುವ ಘಟನೆ ಇದಾಗಿದೆ. ನಾಲ್ಕು ವರ್ಷಗಳ ವಿಚಾರಣೆ ನಡೆಸಿದ ಕೋರ್ಟ್​ ಇದೀಗ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜತೆಗೆ, 10 ಸಾವಿರ ರೂಪಾಯಿಗಳ ದಂಡ ವಿಧಿಸಿದೆ.

ವರ್ಷದ ಬಾಲಕಿ ಮೇಲೆ ಕಾಮುಕ ತಂದೆ ಹಾಗೂ ಅವನ ಸಹೋದರ ಸೇರಿ ಅತ್ಯಾಚಾರ ಎಸಗಿದ್ದ ಭಯಾನಕ ಘಟನೆ ಇದಾಗಿದೆ. ಈ ಘಟನೆ ತಿಳಿಯುತ್ತಿದ್ದಂತೇ ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಮನೆಗೆ ಧಾವಿಸಿ ಬಾಲಕಿಯನ್ನು ಬಚಾವ್​ ಮಾಡಿದ್ದರು.

ಅತ್ಯಾಚಾರದ ಹಿನ್ನೆಲೆಯಲ್ಲಿ ತಂದೆ ಮತ್ತು ಆತನ ಸಹೋದರನ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಪೈಲಾನಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಬಾಲಕಿಯ ಸುರಕ್ಷತೆಯ ದೃಷ್ಟಿಯಿಂದ ಈ ಇಬ್ಬರು ಕಾಮುಕರ ಹೆಸರನ್ನು ಸದ್ಯ ಬಹಿರಂಗಪಡಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net