15 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ: ಈ ಬಾರಿ ಇವೆ ಹಲವು ವಿಶೇಷ- ಇಲ್ಲಿದೆ ಡಿಟೇಲ್ಸ್​

nagesh bc
Published on

ಬೆಂಗಳೂರು: 6 ರಿಂದ 8 ನೇ ತರಗತಿಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಚಾಲನೆ ಕೊಟ್ಟಿದ್ದು, 15 ಸಾವಿರ ಶಿಕ್ಷಕರ ನೇಮಕಕಕ್ಕೆ ಮಾರ್ಚ್ 21 ರಂದು ಅಧಿಸೂಚನೆ ಹೊರಡಿಸಲಿದೆ.

ಈ ಕುರಿತು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅರ್ಜಿ ಸಲ್ಲಿಕೆಗೆ ಸಂಪೂರ್ಣ ಮಾಹಿತಿಯನ್ನು ಅವರು ತಿಳಿಸಿದ್ದಾರೆ. ಅದರ ವಿವರ ಇಲ್ಲಿದೆ..

* ಅರ್ಜಿ ಸಲ್ಲಿಕೆಗೆ - ಮಾರ್ಚ್ 23 ರಿಂದ ಏಪ್ರಿಲ್ 22 ವರೆಗೆ ಅವಕಾಶ.

* ಮೇ 21, 22 ರಂದು ರಾಜ್ಯಾದ್ಯಂತ ಶಿಕ್ಷಕರ ಹುದ್ದೆಗೆ ಪರೀಕ್ಷೆ. ಈ ಬಾರಿ ನೇಮಕಾತಿಯಲ್ಲಿ ಮಂಗಳಮುಖಿಯರಿಗೆ 1% ಮೀಸಲಾತಿ.

* ಬಿಎಡ್, ಟಿಇಟಿ ಮಾಡಿದ ಎಂಜಿನಿಯರ್ ವಿದ್ಯಾರ್ಥಿಗಳಿಗೂ ಈ ಬಾರಿ ಪರೀಕ್ಷೆ ಬರೆಯಲು ಅವಕಾಶ.

* CBZ, PCM ಕಾಂಬಿನೇಷನ್ ಅಭ್ಯರ್ಥಿಗಳಿಗೂ ಅವಕಾಶ.

* ಈ ಬಾರಿ ಅಭ್ಯರ್ಥಿಗಳ ವಯಸ್ಸಿನ ಮಿತಿ ಎರಡು ವರ್ಷ ಹೆಚ್ಚಳ. SC,ST, ಪ್ರವರ್ಗ 1- 47 ವರ್ಷ. OBC- 45 ಸಾಮಾನ್ಯ ವರ್ಗ - 42

* ಒಟ್ಟು 400 ಅಂಕದ‌ ಪರೀಕ್ಷೆ ಇರುತ್ತೆ. ಮೊದಲ ಪತ್ರಿಕೆ - ಸಾಮಾನ್ಯ ಜ್ಞಾನ -150 ಅಂಕ. 2ನೇ ಪತ್ರಿಕೆ ಐಚ್ಛಿಕ ವಿಷಯ- 150 ಅಂಕ ( ಎಲಿಜಬಲ್ 45% ಅಂಕ ಪಡೆಯೋದು ಕಡ್ಡಾಯ) 3 ನೇ ಪೇಪರ್ - ಭಾಷೆಯ ವಿಷಯ - 100 ಅಂಕ ( ಎಲಿಜಬಲ್ 50% ಕಡ್ಡಾಯವಾಗಿ ಅಂಕ ಪಡೆಯಬೇಕು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net