ತರಬೇತಿ, ಉದ್ಯೋಗಕ್ಕಾಗಿ ಆರ್‌ವಿ ವಿಶ್ವವಿದ್ಯಾಲಯ- ಇಬಾರಕಿ ಪ್ರಿಫೆಕ್ಟರ್ ಒಡಂಬಡಿಕೆ

RV Mou japan
Published on

ಬೆಂಗಳೂರು ಭಾರತೀಯ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಉದ್ಯೋಗವನ್ನು ನೀಡುವ ನಿಟ್ಟಿನಲ್ಲಿ ಆರ್‌ವಿ ವಿಶ್ವವಿದ್ಯಾಲಯವು ಜಪಾನಿನ ಇಬಾರಕಿ ಪ್ರಿಫೆಕ್ಟರ್ ಸರ್ಕಾರವು ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ.

ಮಂಗಳವಾರ ಆರ್‌ವಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬಾರಕಿ ಪ್ರಿಫೆಕ್ಟರ್ ಗವರ್ನರ್ ಕಝುಹಿಕೊ ಒಯಿಗಾವಾ ಹಾಗೂ ಆರ್‌ವಿ ವಿಶ್ವವಿದ್ಯಾಲಯದ ಕುಲಪತಿ ಡಾ. ವೈಎಸ್‌ಆರ್ ಮೂರ್ತಿ ಒಡಂಬಡಿಕೆಗೆ ಸಹಿ ಮಾಡಿದರು.

ಜಪಾನ್ ಪ್ರತಿಷ್ಠಾನವು ಅನುಮೋದಿಸಲ್ಪಟ್ಟ ಕ್ರೆಡಿಟ್ ಬೇರಿಂಗ್ ಜಪಾನೀಸ್ ಭಾಷಾ ಪ್ರಮಾಣಪತ್ರ ಕೋರ್ಸ್ ಅನ್ನು ನೀಡುವ ಕೆಲವು ವಿಶ್ವವಿದ್ಯಾಲಯಗಳಲ್ಲಿ ಆರ್‌ವಿ ವಿಶ್ವವಿದ್ಯಾಲಯವು ಸ್ಥಾನ ಪಡೆದಿದೆ.

ಎಂಒಯು ಬಳಿಕ ಮಾತನಾಡಿದ ಕಝುಹಿಕೊ ಒಯಿಗಾವಾ, ಜಪಾನಿನಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಮತ್ತು ಜಪಾನೀಸ್ ಭಾಷೆಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಇಬರಾಕಿ ಪ್ರಿೆಕ್ಟರ್‌ನಲ್ಲಿ ಉದ್ಯೋಗವಕಾಶ ನೀಡಲು ಪರಿಗಣಿಸಲಾಗುತ್ತದೆ. ಮಾಹಿತಿ ತಂತ್ರಜ್ಞಾನ, ಉತ್ಪಾದನಾ ವಲಯ ಸೇರಿ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ನೀಡಲಾಗುತ್ತಿದೆ ಎಂದು ಹೇಳಿದರು.

ಜಪಾಣ್ ಕಾನ್ಸುಲ್ ಜನರಲ್ ಸುಟೊಮು ನಕಾನೆ ಮಾತನಾಡಿ, ಆರ್‌ವಿ ವಿಶ್ವವಿದ್ಯಾಲಯವು ಈ ವರ್ಷದ ಫೆಬ್ರವರಿಯಲ್ಲಿ ಜಪಾನೀಸ್ ಭಾಷೆ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ಭಾಷೆ ಮತ್ತು ಸಂಸ್ಕೃತಿಯಲ್ಲಿ ಶಿಕ್ಷಣ ನೀಡುತ್ತಿದೆ. ಇದೇ ಸಮಯದಲ್ಲಿ ವಿದ್ಯಾರ್ಥಿ ವಿನಿಯಮ ಕಾರ್ಯಕ್ರಮಗಳು, ಜಂಟಿ ಸಂಶೋಧನೆಗಾಗಿ ಜಪಾನಿನ ಅನೇಕ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆಗಳು ನಡೆಯುತ್ತಿವೆ ಎಂದು ಹೇಳಿದರು.

ಜಪಾನಿನಿ ಇಬರಾಕಿ ಪ್ರೆಕ್ಟರ್ ಟೊಕೊಯೋ ಸಮೀಪದಲ್ಲಿರುವ ನಗರವಾಗಿದೆ. ಬಾಹ್ಯಾಕಾಶ ಸಂಸ್ಥೆಯಾದ ಜೆಎಎಕ್ಸ್‌ಎ, ಇಟಾಚಿ, ಕೊಮಾಟ್ಟು ಮತ್ತು ಕೆನಾನ್ ಸೇರಿ ಹಲವು ಉತ್ಪಾದನಾ ಕಂಪನಿಗಳ ನೆಲೆಯಾಗಿದೆ ಎಂದರು.

ಆರ್‌ವಿ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎವಿಆರ್ ಮೂರ್ತಿ ಮಾತನಾಡಿ, ಇಬರಾಕಿ ಪ್ರಿೆಕ್ಟರ್‌ನಲ್ಲಿರುವ ಜಾಗತಿಕ ತಯಾರಕರು, ಐಟಿ ವಲಯ, ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶವನ್ನು ತೆರೆದುಕೊಳ್ಳಲಿದೆ. ಈ ಉಪಕ್ರಮವು ಆರ್‌ವಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಜಪಾನ್‌ನಲ್ಲಿ ಅಂತಾರಾಷ್ಟ್ರೀಯ ಉದ್ಯೋಗಗಳು ಮತ್ತು ತರಬೇತಿಯನ್ನು ಸುಲಭವಾಗಿ ಪ್ರಯೋಜನ ಪಡೆಯಬಹುದಾಗಿದೆ ಎಂದು ಹೇಳಿದರು.

ಈ ಒಡಂಬಡಿಕೆಯು ಎರಡೂ ದೇಶಗಳ ರಾಜಕೀಯ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಇನ್ನಷ್ಟು ಆಳವಾಗಿಸುವಲ್ಲಿ ಸಹಾಯವಾಗಲಿದೆ. ನಮ್ಮ ವಿದ್ಯಾರ್ಥಿಗಳಿಗೆ ಜಾಗತಿಕ ಅವಕಾಶಗಳನ್ನು ಒದಗಿಸಲು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉದ್ಯೋಗ ಹೆಚ್ಚಿಸಲು ವಿಶ್ವವಿದ್ಯಾಲಯವು ಬದ್ಧವಾಗಿದೆ. - ಪ್ರೊ. ವೈಎಸ್‌ಆರ್ ಮೂರ್ತಿ, ಆರ್‌ವಿ ವಿವಿ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net