ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಪ್ರಾಣವನ್ನೇ ಪಣಕ್ಕಿಟ್ಟ ಮಾಡೆಲ್…ವಿಡಿಯೋ ನೋಡಿ ಥಂಡಾ ಹೊಡೆದ ನೆಟ್ಟಿಜನ್ಸ್

model
Published on

ರಷ್ಯಾ: ಸೋಷಿಯಲ್ ಮೀಡಿಯಾ ಒಂದು ಚಟವಾಗಿ ಮಾರ್ಪಟ್ಟಿದೆ. ಇದಿಲ್ಲದೆ ಯಾವುದೇ ಯುವಕ-ಯುವತಿಯರು ಬದುಕಲು ಸಾಧ್ಯವಿಲ್ಲ. ಒಂದು ರೀತಿಯಲ್ಲಿ ಅತ್ಯಂತ ಅಪಾಯಕಾರಿ ಚಟವೆಂದರೆ ತಪ್ಪಾಗಲಾರದು. ಇದನ್ನು ಬಳಸದೆ ಜನರು ಸಹ ಬದುಕಲು ಸಾಧ್ಯವಾಗುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಐಡೆಂಟಿಟಿಯನ್ನು ಸೃಷ್ಟಿಸಿಕೊಳ್ಳಲು, ವೈರಲ್ ಆಗಲು ಇಲ್ಲಸಲ್ಲದ್ದನ್ನೆಲ್ಲಾ ಮಾಡುತ್ತಿದ್ದಾರೆ. ಇನ್ನು ಲೈಕ್ಸ್ ಮತ್ತು ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಜನರು ತಮ್ಮ ಜೀವನವನ್ನೇ ಪಣಕ್ಕಿಡುತ್ತಿದ್ದಾರೆ. ಹೌದು, ಮಾಡೆಲ್​​​ ಒಬ್ಬರು ಇಂತಹ ರೀಲ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಮಾಡೆಲ್ ತನ್ನ ಪ್ರಾಣವನ್ನು ಪಣಕ್ಕಿಟ್ಟು ಅಪಾಯಕಾರಿ ಸಾಹಸಗಳನ್ನು ಮಾಡುತ್ತಿದ್ದಾಳೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಮಾಡೆಲ್ ಅತ್ಯಂತ ಎತ್ತರದ ಕಟ್ಟಡದ ಮೇಲೆ ನಿಂತಿದ್ದು, ವ್ಯಕ್ತಿಯೊಬ್ಬ ಆಕೆಯ ಕೈಯನ್ನು ಹಿಡಿದಿದ್ದಾನೆ. ನಂತರ ಕಟ್ಟಡದಿಂದ ಕೆಳಗೆ ನೇತಾಡುತ್ತಿರುವುದನ್ನು ಕಾಣಬಹುದು. ಅದು ಯಾವುದೇ ತಂತಿ ಅಥವಾ ಹಗ್ಗದ ಸಹಾಯವಿಲ್ಲದೆ, ಆಕೆ ಹುಡುಗನ ಕೈಯ ಸಹಾಯದಿಂದ ಮಾತ್ರ ಕೆಳಗೆ ನೇತಾಡುತ್ತಾಳೆ. ಬಹುಮಹಡಿ ಕಟ್ಟಡದಿಂದ ಇಂತಹ ಸಾಹಸ ಪ್ರದರ್ಶಿಸುವುದು ಎಷ್ಟು ಕಷ್ಟ ಎಂದು ಈ ವಿಡಿಯೋ ನೋಡಿ ನೀವೇ ಊಹಿಸಬಹುದು.

ರಷ್ಯಾದ ಮಾಡೆಲ್ 
ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ @pharaohonX ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ವಿಡಿಯೋದ ಶೀರ್ಷಿಕೆಯಲ್ಲಿ ಲೈಕ್ಸ್ ಪಡೆಯಲು ಹೀಗೆ ಮಾಡುವುದು ಸರಿಯೇ? ಎಂದಿದೆ. ವೈರಲ್ ಆಗುತ್ತಿರುವ ಈ ಪೋಸ್ಟ್ ಪ್ರಕಾರ, ಈಕೆ ರಷ್ಯಾದ ಮಾಡೆಲ್ ಎಂದು ಹೇಳಲಾಗುತ್ತದೆ, ಅವರ ಹೆಸರು ವಿಕ್ಟೋರಿಯಾ ಒಡಿಂಟ್ಕೋವಾ. ಈ ವಿಡಿಯೋ ಯುಎಇಯಿಂದ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಪೋಸ್ಟ್ ಬರೆಯುವ ಸಮಯದವರೆಗೆ, 14 ಮಿಲಿಯನ್ ಜನರು ಇದನ್ನು ನೋಡಿದ್ದಾರೆ ಮತ್ತು 60 ಸಾವಿರ ಜನರು ಅದನ್ನು ಲೈಕ್ಸ್ ಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ವಿಡಿಯೋಗೆ ಕಾಮೆಂಟ್ ಮಾಡಿ, ಈ ಸಾಹಸವನ್ನು ಭಯಾನಕ ಮತ್ತು ಅಪಾಯಕಾರಿ ಎಂದು ಕರೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net