

ನವದೆಹಲಿ: ರಷ್ಯಾದ ಹುಡುಗಿಯೊಬ್ಬಳು ( Russian Girl Wants Indian Groom ) ಭಾರತೀಯ ಸಂಸ್ಕೃತಿಯನ್ನು ಎಷ್ಟು ಇಷ್ಟಪಡುತ್ತಾಳೆ. ಹೀಗಾಗಿ ಈಗ ತನಗಾಗಿ ಭಾರತೀಯ ಹುಡುಗನನ್ನು ಹುಡುಕುತ್ತಿದ್ದಾಳೆ. ಈಕೆ ಹಾಕಿರುವ ಕಂಡಿಶನ್ ವಿಡಿಯೋ ಸಖತ್ ವೈರಲ್ ಆಗಿದೆ.
ನೆಲ್ಲಿ ಎಂಬ ರಷ್ಯಾದ ಹುಡುಗಿ ಇನ್‌ಸ್ಟಾ ಪ್ರೊಫೈಲ್ ಪ್ರಕಾರ ಈಗ ದುಬೈನಲ್ಲಿ ವಾಸಿಸುತ್ತಿದ್ದಾಳೆ. ಅಕ್ಟೋಬರ್ 18 ರಂದು, ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತನಗಾಗಿ ಭಾರತೀಯ ವರನನ್ನು ಹುಡುಕುತ್ತಿರುವುದಾಗಿ ಹೇಳುವುದನ್ನು ಕೇಳಬಹುದು.
ಒಂಟಿ ಹುಡುಗರು ನೆಲ್ಲಿಯ ವೀಡಿಯೋ ನೋಡಿದ ತಕ್ಷಣ ಹೂಮಾಲೆ ಹಾಕಿಕೊಂಡು ರೆಡಿಯಾಗಿ ಕುಳಿತಿರುವುದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ರಷ್ಯಾದ ಹುಡುಗಿಯ ಷರತ್ತುಗಳನ್ನು ಕೇಳಿದ ತಕ್ಷಣ ನನಗೆ ನೀನು ಬೇಡ ಎಂದು ಹೇಳಿ ಕಾಮೆಂಟ್ ಮಾಡುತ್ತಿದ್ದಾರೆ. ಹಾಗಿದ್ರೆ ಈಜೆ ಹಾಕಿರುವ ಷರತ್ತುಗಳು ಏನು ಎಂದು ನೋಡೋಣ ಬನ್ನಿ....
ನೆಲ್ಲಿ ಎಂಬ ರಷ್ಯಾದ ಹುಡುಗಿಯ ವೀಡಿಯೊ ವೈರಲ್ ಆಗಿದ್ದು, ನಾನು ಭಾರತೀಯ ವರನನ್ನು ಹುಡುಕುತ್ತಿದ್ದೇನೆ. ಹುಡುಗನ ಎತ್ತರ ಆರು ಅಡಿಗಿಂತ ಹೆಚ್ಚಿರಬೇಕು. ಕಣ್ಣುಗಳು ಹಸಿರು ಆಗಿರಬೇಕು. ನೀವು ಸಂಗೀತ ಪ್ರೇಮಿಯಾಗಿರಬೇಕು ಮತ್ತು ನೃತ್ಯ ಮಾಡಲು ತಿಳಿದಿರಬೇಕು. ಇದಲ್ಲದೆ, ನೀವು ಪ್ರಯಾಣವನ್ನು ಇಷ್ಟಪಡಬೇಕು. ನನ್ನನ್ನು ಅಪಾರವಾಗಿ ಪ್ರೀತಿಸಬೇಕು, ಆದರೆ ಅವನು ರಷ್ಯಾವನ್ನು ಪ್ರೀತಿಸಬೇಕು. ಅವರು ಅಕ್ಟೋಬರ್ 18 ರಂದು ತಮ್ಮ Insta ಖಾತೆ @girl_white_indian ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದನ್ನು ಇಲ್ಲಿಯವರೆಗೆ 2.5 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ ಮತ್ತು ಅನೇಕ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.