ಯುಕ್ರೇನ್​ ಮೇಲೆ ರಷ್ಯಾ ಡ್ರೋನ್​ ದಾಳಿ: 8 ಮಂದಿಗೆ ಗಂಭೀರ ಗಾಯ | Russia

Russia
Published on

ಕೈವ್: ರಷ್ಯಾವು(Russia) ಯುಕ್ರೇನಿಯನ್ ರಾಜಧಾನಿಯ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ಮಾಡಿದೆ ಎಂದು ಕೈವ್ ಅಧಿಕಾರಿಗಳು ತಿಳಿಸಿದ್ದಾರೆ.ಅಲ್ಲದೆ, ಅನೇಕ ಜಿಲ್ಲೆಗಳಲ್ಲಿ ಕಟ್ಟಡಗಳು ಮತ್ತು ಮನೆಗಳಿಗೆ ಹಾನಿಯಾಗಿದೆ ಮತ್ತು ಕನಿಷ್ಠ ಎಂಟು ಜನರು ಗಾಯಗೊಂಡಿದ್ದಾರೆ.‘

ಈ ದಾಳಿಯ ಬಗ್ಗೆ ಕೈವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ, ರಾಜಧಾನಿಯಲ್ಲಿ ಸ್ಫೋಟಗಳು ಮತ್ತು ನಗರವು ಬ್ಯಾಲಿಸ್ಟಿಕ್ ದಾಳಿಯಲ್ಲಿದೆ. ಅಲ್ಲದೆ, ರಾಜಧಾನಿಯಲ್ಲಿ ಪ್ರಸ್ತುತ 8 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇವರಲ್ಲಿ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದರು. ಡೆಸ್ನ್ಯಾನ್ಸ್ಕಿ ಮತ್ತು ಡಾರ್ನಿಟ್ಸ್ಕಿ ಜಿಲ್ಲೆಗಳಲ್ಲಿನ ವಸತಿ ರಹಿತ ಕಟ್ಟಡಗಳಲ್ಲಿ ದೊಡ್ಡ ಬೆಂಕಿ ಉರಿಯುತ್ತಿದೆ ಎಂದು ಕ್ಲಿಟ್ಸ್ಕೊ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ನಗರದ ಮಿಲಿಟರಿ ಆಡಳಿತದ ಮುಖ್ಯಸ್ಥ ಟೈಮೂರ್ ಟ್ಕಾಚೆಂಕೊ, ಡ್ನಿಪ್ರೊವ್ಸ್ಕಿ ಜಿಲ್ಲೆಯಲ್ಲೂ ಹಾನಿ ಸಂಭವಿಸಿದೆ. ಅಲ್ಲದೆ, ಅನಿರ್ದಿಷ್ಟ ಸಂಖ್ಯೆಯ ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದ್ದಾರೆ.

ಯುದ್ಧವು ನಾಲ್ಕನೇ ಚಳಿಗಾಲಕ್ಕೆ ಕಾಲಿಡುತ್ತಿದ್ದಂತೆ ಕೈವ್‌ನ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ರಷ್ಯಾದ ಮೇಲೆ ಒತ್ತಡ ಹೇರುತ್ತಿರುವಾಗ ಈ ದಾಳಿ ನಡೆದಿದೆ.

ಶುಕ್ರವಾರ, ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್, ಕೈವ್‌ನ ದೀರ್ಘ-ಶ್ರೇಣಿಯ ಕ್ಷಿಪಣಿ ಸಾಮರ್ಥ್ಯವನ್ನು ಬಲಪಡಿಸಲು ಮಿತ್ರರಾಷ್ಟ್ರಗಳನ್ನು ಒತ್ತಾಯಿಸಿದ್ದಾರೆ. ಯುರೋಪಿಯನ್ ಒಕ್ಕೂಟದ ನಾಯಕರು ಯುಕ್ರೇನ್‌ನ ರಕ್ಷಣೆಗೆ ಇನ್ನೂ ಎರಡು ವರ್ಷಗಳ ಕಾಲ ಹಣಕಾಸು ಒದಗಿಸುವತ್ತ ಹೆಜ್ಜೆ ಇಟ್ಟ ಒಂದು ದಿನದ ನಂತರ, ಈ ಕ್ರಮ ಕೈಗೊಂಡರು.

ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಒಕ್ಕೂಟವು ಈ ವಾರ ರಷ್ಯಾದ ಇಂಧನದ ಮೇಲೆ ಹೊಸ ನಿರ್ಬಂಧಗಳನ್ನು ಘೋಷಿಸಿದ್ದು, ಅದರ ಯುದ್ಧ ಆರ್ಥಿಕತೆಯನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net