

ರಷ್ಯಾ ಸೇನಾಪಡೆಯ ದಾಳಿಗೆ ಯೂಕ್ರೇನ್ನಲ್ಲಿ ಇದುವರೆಗೆ ಒಟ್ಟು ಮೂವರು ಮಕ್ಕಳು ಸೇರಿ 198 ಜನರು ಮೃತಪಟ್ಟಿದ್ದಾರೆ. 1115 ಜನ ಗಾಯಗೊಂಡಿದ್ದು, ಈ ಪೈಕಿ 33 ಮಕ್ಕಳು ಎಂದು ಯೂಕ್ರೇನ್ ಆರೋಗ್ಯ ಸಚಿವ ವಿಕ್ಟರ್ ಲಿಯಾಶ್ಕೊ ಶನಿವಾರ ತಿಳಿಸಿದ್ದಾರೆ.
ಯೂಕ್ರೇನ್ ಸೇನಾಸೌಲಭ್ಯಗಳ ಮೇಲೆ ಪಣಿ ದಾಳಿ ಆರಂಭಿಸಲಾಗಿದೆ. ಗುರುವಾರದಿಂದೀಚೆಗೆ ಯೂಕ್ರೇನ್ನ 821 ಸೇನಾಸೌಲಭ್ಯಗಳ ಮೇಲೆ ಪಣಿ ದಾಳಿ ನಡೆಸಲಾಗಿದೆ. ಇದರಲ್ಲಿ 14 ವಾಯುನೆಲೆ, 19 ಕಮಾಂಡ್ ಸೌಲಭ್ಯ, 24 ಏರ್ ಡಿಫೆನ್ಸ್ ಪಣಿ ವ್ಯವಸ್ಥೆ, 48 ರಾಡಾರ್, ಏಳು ಯುದ್ಧವಿಮಾನಗಳು, 9 ಡ್ರೋನ್ಗಳು, 87 ಟ್ಯಾಂಕ್ಗಳು ಮತ್ತು 8 ಸೇನಾ ನೌಕೆಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಇಗೋರ್ ಕೊನಶೆನ್ಕೋವ್ ಶನಿವಾರ ತಿಳಿಸಿದರು.
ಮೂರೇ ದಿನಕ್ಕೆ ರಾಜಧಾನಿ ವಶ
ರಷ್ಯಾ ಸೇನೆಯ ವಿಶೇಷ ಕಾರ್ಯಾಚರಣೆ ಬಹಳ ಪ್ರವಾಗಿ ನಡೆದಿದ್ದು, ಕೇವಲ ಮೂರೇ ದಿನಕ್ಕೆ ಯೂಕ್ರೇನ್ ರಾಜಧಾನಿ ಕಿಯೆವ್ ಅದರ ವಶವಾಗಿದೆ. ಯೂಕ್ರೇನ್ನ ಪ್ರಜಾಸತ್ತಾತ್ಮಕ ಸರ್ಕಾರದ ಪತನವಷ್ಟೇ ಇನ್ನು ಬಾಕಿ ಇದೆ.
ವಿಟೋ ಪ್ರಯೋಗಿಸಿದ ರಷ್ಯಾ - ನಾ, ಭಾರತ, ಯುಎಇ ಗೈರು
ಯೂಕ್ರೇನ್ ಮೇಲೆ ದಾಳಿ ನಿಲ್ಲಿಸಬೇಕು ಮತ್ತು ಸೇನೆ ಹಿಂಪಡೆಯಬೇಕು ಎಂದು ರಷ್ಯಾ ಮೇಲೆ ಒತ್ತಡ ಹೇರುವ, ಆಗ್ರಹಿಸುವ ನಿರ್ಣಯ ಅಂಗೀಕರಿಸುವುದಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಶನಿವಾರ ಅಪರಾಹ್ನ 3 ಗಂಟೆಗೆ (ನ್ಯೂಯಾರ್ಕ್ ಸಮಯ) ತುರ್ತು ಸಭೆ ನಡೆಸಿತು. 15 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಸಮಿತಿಯಲ್ಲಿ ಮತದಾನ ಪ್ರಕ್ರಿಯೆಯಿಂದ ಚೀನಾ, ಭಾರತ ಮತ್ತು ಯುಎಇಗಳು ಗೈರಾಗಿದ್ದವು. ವಿಶ್ವಸಂಸ್ಥೆಯಲ್ಲಿ ಕಾಯಂ ಸದಸ್ಯತ್ವ ಮತ್ತು ವಿಟೋ ಹಕ್ಕು ಹೊಂದಿರುವ ರಷ್ಯಾ, ಈ ನಿರ್ಣಯದ ವಿರುದ್ಧ ವಿಟೋ ಪ್ರಯೋಗ ಮಾಡಿದೆ. ಹೀಗಾಗಿ ನಿರ್ಣಯದ ಪರವಾಗಿ 11&1ರ ಮತದಾನವಾಗಿದೆ.
ನೆಲಬಿಟ್ಟು ಕದಲಲಾರೆ!
"ಯುದ್ಧ ನಡೆಯುತ್ತಿರುವುದು ನನ್ನ ದೇಶದಲ್ಲಿ. ಈ ನೆಲವನ್ನು ಬಿಟ್ಟು ಎಲ್ಲಿಗೂ ಬರಲಾರೆ. ನಾವು ಶಸ್ತ್ರತ್ಯಾಗ ಮಾಡುವುದಿಲ್ಲ. ಇದು ನಮ್ಮ ನೆಲ ಮತ್ತು ನೆಲೆ, ನಮ್ಮ ದೇಶ, ನಮ್ಮ ಮಕ್ಕಳು, ಎಲ್ಲವನ್ನೂ ನಾವು ರಸುತ್ತೇವೆ. ಯೂಕ್ರೇನ್ ಸೇನಾಪಡೆ ರಷ್ಯಾ ಸೇನೆಗೆ ಸೆಡ್ಡು ಹೊಡೆಯಲಿದೆ. ಪ್ರಜೆಗಳಾರೂ ಭಯಭೀತರಾಗಬೇಕಾಗಿಲ್ಲ' ಎಂದು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶನಿವಾರ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ರಷ್ಯಾ ಸೇನೆ ಈಗಾಗಲೇ ರಾಜಧಾನಿ ತಲುಪಿದ್ದರಿಂದ ಅಲ್ಲಿಂದ ಸುರತವಾಗಿ ಸ್ಥಳಾಂತರವಾಗಲು ನೆರವು ನೀಡುವುದಾಗಿ ವೊಲೊಡಿಮಿರ್ ಝೆಲೆನ್ಸ್ಕಿಗೆ ಅಮೆರಿಕ ತಿಳಿಸಿತ್ತು. ಆದರೆ, ಈ ನೆಲಬಿಟ್ಟು ಬರುವುದಿಲ್ಲ ಎಂದು ಝೆಲೆನ್ಸ್ಕಿ ಸ್ಪಷ್ಟವಾಗಿ ಅಮೆರಿಕಕ್ಕೆ ತಿಳಿಸಿದ್ದಾಗಿ ವರದಿಯಾಗಿದೆ.
ರಷ್ಯಾ ವಿಮಾನಗಳ ಮೇಲೆ ದಾಳಿ
ಯೂಕ್ರೇನ್ ಸೇನಾಪಡೆಯು ರಷ್ಯಾದ ಸಾರಿಗೆ ವಿಮಾನ "ಐಐ-76' ಅನ್ನು ಕಿಯೆವ್ನ ದಣಕ್ಕೆ 25 ಮೈಲಿ ದೂರದ ವಾಸಿಲ್ಕಿವ್ ಪಟ್ಟಣದ ಸಮೀಪ ಹೊಡೆದುರುಳಿಸಿದೆ. ಇನ್ನೊಂದು ರಷ್ಯಾ ಸೇನಾ ಸಾರಿಗೆ ವಿಮಾನವನ್ನು ಕಿಯೆವ್ನ ದಣಕ್ಕೆ 50 ಮೈಲಿ ದೂರದ ಬಿಲಾ ತ್ಸೆರ್ಕ್ವಾ ಪಟ್ಟಣದ ಸಮೀಪ ಹೊಡೆದುರುಳಿಸಿದೆ. ಇದನ್ನು ಅಮೆರಿಕದ ಗುಪ್ತಚರ ದಳ ಖಚಿತಪಡಿಸಿದೆ. ರಷ್ಯಾ ಸೇನೆ ಈ ಮಾಹಿತಿಯನ್ನು ದೃಢೀಕರಿಸಿಲ್ಲ.
-ನೆರವಿಗೆ ನ್ಯಾಟೋ ಪಡೆ
ಯೂಕ್ರೇನ್ ನೆರವಿಗೆ ನ್ಯಾಟೋ ಪಡೆ ಧಾವಿಸಲಿದೆ. ಪೌರಾತ್ಯದಲ್ಲಿರುವ ಸದಸ್ಯ ರಾಷ್ಟ್ರಗಳ ನೆರವಿಗೆ ಇದೇ ಮೊದಲ ಬಾರಿಗೆ ನ್ಯಾಟೋ ಪಡೆ ರವಾನೆ ಆಗಲಿದೆ. ಆದರೆ, ಯಾವ ಪ್ರಮಾಣದಲ್ಲಿ ಎಂಬುದನ್ನು ನ್ಯಾಟೋ ಸ್ಪಷ್ಟಪಡಿಸಿಲ್ಲ.
ಅಮೆರಿಕದಿಂದ ಸುರಾ ನೆರವು
ಯುದ್ಧ ಕಣದಲ್ಲಿರುವ ಯೂಕ್ರೇನ್ಗೆ ಹಿಂದಿನ ವರ್ಷ ಅನುಮೋದಿಸಿದ್ದ 100 ಕೋಟಿ ಡಾಲರ್ ಸುರಾ ನೆರವಿನ ಪೈಕಿ 35 ಕೋಟಿ ಡಾಲರ್ (2,626 ಕೋಟಿ ರೂಪಾಯಿ) ನೆರವನ್ನು ಬಿಡುಗಡೆ ಮಾಡಲು ಅಮೆರಿಕ ಸರ್ಕಾರ ಶುಕ್ರವಾರ ತಡರಾತ್ರಿ ಕ್ರಮ ತೆಗೆದುಕೊಂಡಿದೆ.
ಪಶ್ಚಿಮದ ಗಡಿ ಕಡೆಗೆ ಯೂಕ್ರೇನಿಯನ್ನರು
ಯುದ್ಧದಿಂದ ಭಯಭೀತರಾಗಿರುವ ಯೂಕ್ರೇನಿಯನ್ನರು ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಪಶ್ಚಿಮದ ಗಡಿ ಭಾಗಕ್ಕೆ ಓಡತೊಡಗಿದ್ದಾರೆ. ಪೋಲಂಡ್ನ ಪ್ರೆಝೆಮಿಸಿಲ್ ಪಟ್ಟಣಕ್ಕೆ ಆಗಮಿಸಿರುವ ಯೂಕ್ರೇನ್ ಮಹಿಳೆ ದರಿಯಾ, ಭಯಭೀತ ಜನರ ಸಂಕಷ್ಟವನ್ನು ಅನಾವರಣಗೊಳಿಸಿದ್ದಾರೆ. ದೇಶದ ಗಡಿ ದಾಟಿ ಬರುವುದು ಸುಲಭವಲ್ಲ. ಕಳೆದ 48 ಗಂಟೆಗಳ ಅವಧಿಯಲ್ಲಿ 50,000ಕ್ಕೂ ಹೆಚ್ಚು ಯೂಕ್ರೇನಿಯನ್ನರು ನಿರಾಶ್ರಿತರಾಗಿಬಿಟ್ಟಿದ್ದಾರೆ. ಬಹುತೇಕರು, ಪೋಲಂಡ್ ಮತ್ತು ಮೋಲ್ಡೋವಾ ತಲುಪಿದ್ದಾರೆ. ಪೋಲಂಡ್, ಸ್ಲೊವಾಕಿಯಾ, ಹಂಗರಿ, ರೊಮಾನಿಯಾ, ಮೋಲ್ಡೋವಾ ಪ್ರವೇಶಿಸುವುದಕ್ಕಾಗಿ ಯೂಕ್ರೇನ್ನಿಂದ ವಾಹನಗಳು ಗಡಿಭಾಗದಲ್ಲಿ ಸಾಲುಗಟ್ಟಿ ನಿಂತಿವೆ.
ಶಸ್ತ್ರತ್ಯಾಗ ಮಾಡಲ್ಲ
"ಯುದ್ಧ ನಡೆಯುತ್ತಿರುವುದು ನನ್ನ ದೇಶದಲ್ಲಿ. ಈ ನೆಲವನ್ನು ಬಿಟ್ಟು ಎಲ್ಲಿಗೂ ಬರಲಾರೆ. ನಾವು ಶಸ್ತ್ರತ್ಯಾಗ ಮಾಡುವುದಿಲ್ಲ. ಇದು ನಮ್ಮ ನೆಲ ಮತ್ತು ನೆಲೆ, ನಮ್ಮ ದೇಶ, ನಮ್ಮ ಮಕ್ಕಳು, ಎಲ್ಲವನ್ನೂ ನಾವು ರಸುತ್ತೇವೆ. ಯೂಕ್ರೇನ್ ಸೇನಾಪಡೆ ರಷ್ಯಾ ಸೇನೆಗೆ ಸೆಡ್ಡು ಹೊಡೆಯಲಿದೆ. ಪ್ರಜೆಗಳಾರೂ ಭಯಭೀತರಾಗಬೇಕಾಗಿಲ್ಲ' ಎಂದು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶನಿವಾರ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ರಷ್ಯಾ ಸೇನೆ ಈಗಾಗಲೇ ರಾಜಧಾನಿ ತಲುಪಿದ್ದರಿಂದ ಅಲ್ಲಿಂದ ಸುರತವಾಗಿ ಸ್ಥಳಾಂತರವಾಗಲು ನೆರವು ನೀಡುವುದಾಗಿ ವೊಲೊಡಿಮಿರ್ ಝೆಲೆನ್ಸ್ಕಿಗೆ ಅಮೆರಿಕ ತಿಳಿಸಿತ್ತು. ಆದರೆ, ಈ ನೆಲಬಿಟ್ಟು ಬರುವುದಿಲ್ಲ ಎಂದು ಝೆಲೆನ್ಸ್ಕಿ ಸ್ಪಷ್ಟವಾಗಿ ಅಮೆರಿಕಕ್ಕೆ ತಿಳಿಸಿದ್ದಾಗಿ ವರದಿಯಾಗಿದೆ.
ಬಂದೂಕು ಹಿಡಿದ ನವಜೋಡಿ
ಕಿಯೆವ್ನಲ್ಲಿ ಶುಕ್ರವಾರ ವಿವಾಹವಾದ ನವಜೋಡಿ ಶನಿವಾರ ನಗರ ರಕ್ಷಣೆಗಾಗಿ ಬಂದೂಕು ಹಿಡಿದು ರಷ್ಯಾ ಸೇನೆಗೆ ಪ್ರತಿರೋಧ ನೀಡಲು ಮುಂದಾಗಿರುವ ವಿಚಾರ ಜಗತ್ತಿನ ಗಮನಸೆಳೆದಿದೆ. ಕಿಯೆವ್ನ ಸಿಟಿ ಕೌನ್ಸಿಲ್ನ ಡೆಪ್ಯೂಟಿ 21 ವರ್ಷದ ಅರಿವಾ ಮತ್ತು ಸ್ಟಾ್ವೇರ್ ಇಂಜಿನಿಯರ್ 24 ವರ್ಷದ ರ್ಸೀನ್ ಈ ಜೋಡಿ. ಸ್ವಯಂಪ್ರೇರಿತವಾಗಿ ರಕ್ಷಣಾ ಕಾರ್ಯಕ್ಕೆ ಮುಂದಾಗಿರುವುದಾಗಿ ಕೂಡ ಹೇಳಿಕೊಂಡಿದೆ.
ಭಾರತದ ಬೆಂಬಲ ಕೋರಿದ ಯೂಕ್ರೇನ್
ಯೂಕ್ರೇನ್ಗೆ ರಷ್ಯಾದ 1 ಲಕ್ಷಕ್ಕೂ ಹೆಚ್ಚು ಸೈನಿಕರು ಆಗಮಿಸಿದ್ದಾರೆ. ಅವರ ವಿರುದ್ಧ ಹೋರಾಟ ನಡೆಯುತ್ತಿದೆ. ಈ ಸನ್ನಿವೇಶದಲ್ಲಿ ವಿಶ್ವಸಂಸ್ಥೆಯಲ್ಲಿ ರಾಜಕೀಯ ಬೆಂಬಲ ನೀಡುವಂತೆ ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಮನವಿ ಮಾಡಿದ್ದರು. ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ರಷ್ಯಾ ದಾಳಿ ವಿರೋಧಿಸಿ ಮಂಡಿಸಿದ ನಿರ್ಣಯಕ್ಕೆ ಪರವಾಗಿ ಮತಚಲಾಯಿಸಲು ಯೂಕ್ರೇನ್ ಕೋರಿತ್ತು. ಇದನ್ನು ಅಧ್ಯಕ್ಷ ಝೆಲೆನ್ಸ್ಕಿ ಟ್ವೀಟ್ ಮಾಡಿ ಬಹಿರಂಗ ಪಡಿಸಿದ್ದರು.
ಯೂಕ್ರೇನ್ ಯೋಧನ ಆತ್ಮಾಹುತಿ
ರಷ್ಯಾ ಸೇನೆಯ ಟ್ಯಾಂಕ್ಗಳು ದಣದ ಖೆರ್ಸನ್ ಪ್ರಾಂತ್ಯದ ಕಡೆಗೆ ಮುನ್ನುಗ್ಗುವುದನ್ನು ತಡೆದು ವಿಳಂಬಗೊಳಿಸಲು ಯೂಕ್ರೇನ್ ಯೋಧನೊಬ್ಬ ಆತ್ಮಾಹುತಿ ಮಾಡಿಕೊಂಡಿದ್ದಾರೆ. ವಿಟಲಿ ಸ್ಕಕುನ್ ವೊಲೊಡಿಮಿರೊವಿಚ್ ಎಂಬ ಯೋಧ ಈ ರೀತಿ ಸಾಹಸ ಮಾಡಿದ್ದು. ಮರೈನ್ ಬೆಟಾಲಿಯನ್ನಲ್ಲಿ ಇಂಜಿನಿಯರ್ ಆಗಿರುವ ವಿಟಲಿ ಹೆನಿಚೆಸ್ಕ್ ಬ್ರಿಜ್ ಸಮೀಪ ಪಹರೆಗೆ ನಿಯೋಜಿಸಲ್ಪಟ್ಟಿದ್ದ. ರಷ್ಯಾದ ಟ್ಯಾಂಕ್ಗಳು ಈ ಪ್ರದೇಶಕ್ಕೆ ಪ್ರವೇಶಿಸುತ್ತಿದ್ದಂತೆ ಅವುಗಳನ್ನು ತಡೆಯಲು ಹರಸಾಹಸ ಪಟ್ಟಿದ್ದ. ಕೊನೆಗೆ, ಟ್ಯಾಂಕುಗಳ ಪ್ರವೇಶ ಸಾಧ್ಯವಾಗದಂತೆ ಆಯಕಟ್ಟಿನ ಜಾಗಕ್ಕೆ ಮೈನ್ಸ್ನೊಂದಿಗೆ ಆಗಮಿಸಿ ಸ್ವತಃ ಅದರೊಂದಿಗೆ ಸ್ಫೋಟಿಸಿ ಆತ್ಮಾಹುತಿ ಮಾಡಿಕೊಂಡ.
ರಷ್ಯಾದಲ್ಲಿ ಫೇಸ್ಬುಕ್ಗೆ ಸೆನ್ಸಾರ್
ದಾರಿ ತಪ್ಪಿಸುವ ಮಾಹಿತಿ ಪ್ರಸಾರ ತಡೆಯುವ ಉದ್ದೇಶದೊಂದಿಗೆ ಫೇಸ್ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಮೇಲೆ ಭಾಗಶಃ ಸೆನ್ಸಾರ್ ಹೇರಲಾಗಿದೆ. ಯೂಕ್ರೇನ್ ಮೇಲಿನ ರಷ್ಯಾದ ವಿಶೇಷ ಸೇನಾ ಕಾರ್ಯಾಚರಣೆ ಸಂಬಂಧ ತಪ್ಪು ಮಾಹಿತಿ ಪ್ರಸಾರ ಕಂಡುಬಂದರೆ ಅಂತಹವನ್ನು ತಡೆಹಿಡಿಯಲಾಗುವುದು ಎಂದು ಮಾಸ್ಕೋ ತಿಳಿಸಿದೆ.