

ರಷ್ಯಾದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿರುವ ರಾಷ್ಟ್ರೀಯ ರಜಾದಿನಗಳ ಪೈಕಿ ವಿಕ್ಟರಿ ಡೇ ಒಂದು. ಪ್ರತಿವರ್ಷ ಮೇ 9ರಂದು ವಿಕ್ಟರಿ ಡೇ ಆಚರಿಸಲಾಗುತ್ತಿದೆ. ಎರಡನೇ ವಿಶ್ವ ಮಹಾಯುದ್ಧದಲ್ಲಿ ನಾಜಿ ಜರ್ಮನಿಯ ವಿರುದ್ಧ ಸೋವಿಯತ್ ಯೂನಿಯನ್ಗೆ ಸಿಕ್ಕ ಗೆಲುವನ್ನು ಸಂಭ್ರಮಿಸುವ ಸಲುವಾಗಿ ಈ ಆಚರಣೆ. ಈ ವರ್ಷ ಯೂಕ್ರೇನ್ ಮೇಲೆ ರಷ್ಯಾ ಸಮರ ನಡೆಸುತ್ತಿರುವ ಕಾರಣ ಈ ಆಚರಣೆಗೆ ಪ್ರಾಮುಖ್ಯತೆ ಹೆಚ್ಚಿದೆ.
ಅಧಿಕೃತ ಯುದ್ಧ ಸಾರಲಿದೆಯೇ?
ಯೂಕ್ರೇನ್ ವಿರುದ್ಧ ಸಮರದಲ್ಲಿ ತಾರ್ಕಿಕ ಗೆಲುವು ದಾಖಲಿಸಿ, ಈ ವರ್ಷದ ವಿಕ್ಟರಿ ಡೇ ಆಚರಣೆಗೆ ಹೊಸ ವ್ಯಾಖ್ಯೆ ಬರೆಯಬೇಕು ಎಂಬ ನಿರೀೆಯಲ್ಲಿದೆ ರಷ್ಯಾ. ೆ.24ರಂದು ಯೂಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದೆ. ಆದರೆ, ಇನ್ನೂ ಅಧಿಕೃತವಾಗಿ "ಯುದ್ಧ' ಸಾರಿಲ್ಲ, ವಿಶೇಷ ಸೇನಾ ಕಾರ್ಯಾಚರಣೆ ಎಂದು ಘೋಷಿಸಿತ್ತಷ್ಟೆ.
ಯಾಕೆ ಈ ದಿನಾಚರಣೆ?
ಎರಡನೇ ವಿಶ್ವ ಮಹಾಯುದ್ಧದಲ್ಲಿ ಜರ್ಮನಿಯ ನಾಜಿಗಳನ್ನು ಸೋಲಿಸಿದ್ದನ್ನು ಸ್ಮರಿಸುವ ಸಲುವಾಗಿ ರಷ್ಯಾದಲ್ಲಿ ಪ್ರತಿ ವರ್ಷ ಮೇ 9ರಂದು ವಿಕ್ಟರಿ ಡೇ ಆಚರಿಸಲಾಗುತ್ತದೆ. ಯುರೋಪ್ನ ಮಿತ್ರ ರಾಷ್ಟ್ರಗಳು ವಿಕ್ಟರಿ ಡೇ ಅಥವಾ ವಿಕ್ಟರಿ ಇನ್ ಯುರೋಪ್ ಡೇ ಅನ್ನು ಮೇ 7ರಂದು ಆಚರಿಸುತ್ತವೆ. ಇದೇ ದಿನ ್ರಾನ್ಸ್ನಲ್ಲಿ ಜರ್ಮನಿಯ ನಾಜಿಗಳು ಶರಣಾಗಿದ್ದರು. ಸೋವಿಯತ್ ಯೂನಿಯನ್ ನಾಯಕ ಜೋಸ್ೆ ಸ್ಟಾಲಿನ್, ಜರ್ಮನಿಯ ಬರ್ಲಿನ್ನಲ್ಲಿ ಮಾರನೇ ದಿನ ವಿಜಯೋತ್ಸವ ಆಚರಿಸಿದ್ದರು. ಕೊನೆಗೆ ರಷ್ಯಾದ ಮೊದಲ ಅಧ್ಯಕ್ಷ ಬೋರಿಸ್ ಯೆಲ್ಸಿನ್ ವಿಕ್ಟರಿ ಡೇ ಯನ್ನು ವಾರ್ಷಿಕ ಆಚರಣೆ ಎಂದು ಘೋಷಿಸಿದರು. ಲಿಯೋನಿಡ್ ಬ್ರೆಝ್ನೆವ್ ಮೇ 9 ಅನ್ನು ರಾಷ್ಟ್ರೀಯ ರಜಾ ದಿನ ಎಂದು ಘೋಷಿಸಿದರು. ವ್ಲಾದಿಮಿರ್ ಪುತಿನ್ ವಿಕ್ಟರಿ ಡೇ ಅನ್ನು ಪವಿತ್ರ ಆಚರಣೆಯನ್ನಾಗಿ ಪರಿವರ್ತಿಸಿದರು.