

ರಷ್ಯಾ: ಲಿಂಗ ಬದಲಾವಣೆಯ ಕಾರ್ಯವಿಧಾನಗಳನ್ನು ಕಾನೂನುಬಾಹಿರಗೊಳಿಸುವ ಹೊಸ ಶಾಸನಕ್ಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ಸಹಿ ಹಾಕಿದ್ದಾರೆ.
ಸಂಸತ್ತಿನ ಎರಡೂ ಸದನಗಳಿಂದ ಸರ್ವಾನುಮತದಿಂದ ಮಸೂದೆಯುಯನ್ನು ಅಂಗೀಕರಿಸಲಾಗಿದೆ. "ವ್ಯಕ್ತಿಯ ಲಿಂಗವನ್ನು ಬದಲಾಯಿಸುವ ವೈದ್ಯಕೀಯ ಮಧ್ಯಸ್ಥಿಕೆಗಳನ್ನು" ನಿಷೇಧಿಸಲಾಗಿದೆ. ಇದರಿಂದ ರಷ್ಯಾದಲ್ಲಿ ಈಗಾಗಲೇ ತೊಂದರೆಗೊಳಗಾದ LGBTQ ಸಮುದಾಯಕ್ಕೆ ಹೊಡೆತ ಬೀಳುತ್ತದೆ.
ಈ ಶಾಸನವು, ಯಾವುದೇ "ವ್ಯಕ್ತಿಯ ಲಿಂಗವನ್ನು ಬದಲಾಯಿಸುವ ಗುರಿಯನ್ನು ಹೊಂದಿರುವ ವೈದ್ಯಕೀಯ ಮಧ್ಯಸ್ಥಿಕೆಗಳನ್ನು" ನಿಷೇಧಿಸುತ್ತದೆ. ಜತೆಗೆ ಅಧಿಕೃತ ದಾಖಲೆಗಳಲ್ಲಿ ಮತ್ತು ಸಾರ್ವಜನಿಕ ದಾಖಲೆಗಳಲ್ಲಿ ಬೇರೆ ಬೇರೆ ಲಿಂಗಗಳಿಂದ ಗುರುತಿಸಿಕೊಳ್ಳುವುದನ್ನು ನಿಷೇಧಿಸುತ್ತದೆ. ಒಬ್ಬ ವ್ಯಕ್ತಿಗೆ ಜನ್ಮಜಾತ ನ್ಯೂನ್ಯತೆಗಳು ಬಂದಿದ್ದರೆ, ಅದಕ್ಕೆ ಚಿಕಿತ್ಸೆ ನೀಡಲು ಮಾತ್ರ ವೈದ್ಯಕೀಯ ಮಧ್ಯಸ್ಥಿಕೆಯಲ್ಲಿ ವಿನಾಯಿತಿಯಿದೆ.
ಒಬ್ಬ ವ್ಯಕ್ತಿ ಲಿಂಗ ಬದಲಾಯಿಸಿ ವಿವಾಹವಾದರೂ ಅದನ್ನು ರದ್ದುಗೊಳಿಸುತ್ತದೆ ಮತ್ತು ತೃತೀಯಲಿಂಗಿಗಳು ದತ್ತು ಪಡೆದ ಪೋಷಕರಾಗದಂತೆ ನಿರ್ಬಂಧಿಸಲಾಗುತ್ತದೆ. ಸರ್ಕಾರಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ತಕ್ಷಣ ಇದು ಜಾರಿಗೆ ಬರುತ್ತದೆ.
LGBT ಕಾರ್ಯಕರ್ತರು, ಈ ಕಾನೂನು ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಆತ್ಮಹತ್ಯೆ ಪ್ರಯತ್ನಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.