

ಯೂಕ್ರೇನ್: ಭಾರತ ಮತ್ತು ರಷ್ಯಾ ನಡುವಿನ ಸ್ನೇಹ ಗಾಢವಾಗಿದೆ. ಸೇನಾ ಸಹಕಾರವನ್ನು 2031ರ ತನಕ ವಿಸ್ತರಿಸಲು ಉಭಯ ದೇಶಗಳು 2021ರಲ್ಲಿ ಒಪ್ಪಿಕೊಂಡಿವೆ. ಭಾರತೀಯ ಸೇನೆಗೆ ಎಕೆ-203 ರೈಲ್ಗಳನ್ನು ರಷ್ಯಾದಿಂದ ಖರೀದಿಸಲಾಗುತ್ತಿದೆ. ಉತ್ತರ ಪ್ರದೇಶದ ಅಮೇಠಿಯಲ್ಲಿ 6 ಲಕ್ಷಕ್ಕೂ ಹೆಚ್ಚು ಎಕೆ-203 ಅಸಾಲ್ಟ್ ರೈಲ್ ಉತ್ಪಾದಿಸುವುದಕ್ಕೆ ಸಂಬಂಧಿಸಿ 5,000 ಕೋಟಿ ರೂಪಾಯಿ ಮೊತ್ತದ ಒಪ್ಪಂದವೂ ಕಳೆದ ವರ್ಷವೇ ಆಗಿದೆ. ಮುಂದಿನ ಹತ್ತು ವರ್ಷಗಳ ಅವಧಿಗೆ ರಕ್ಷಣಾ ಪಾಲುದಾರಿಕೆ ಮುಂದುವರಿಯಲಿದೆ.
ರಷ್ಯಾದಿಂದ 40,000 ಕೋಟಿ ರೂಪಾಯಿ ಮೊತ್ತದ 5 ಟ್ರಯಂ ಎಸ್-400 ಯುದ್ಧವಿಮಾನ ಹಾಗೂ ಪಣಿ ದಾಳಿ ನಿರೋಧಕ ವ್ಯವಸ್ಥೆ ಖರೀದಿಯ ಒಪ್ಪಂದಕ್ಕೆ 2018ರ ಅಕ್ಟೋಬರ್ನಲ್ಲಿ ಉಭಯ ರಾಷ್ಟ್ರಗಳು ಸಹಿ ಹಾಕಿವೆ. ಇದರಂತೆ ರಷ್ಯಾವು ಐದು ವರ್ಷದೊಳಗೆ ಎಲ್ಲ 5 ವ್ಯವಸ್ಥೆಯನ್ನು ಭಾರತಕ್ಕೆ ಹಸ್ತಾಂತರಿಸಬೇಕಿದೆ. ಅಂದರೆ, ಭಾರತದ ರಕ್ಷಣಾ ಅಗತ್ಯಗಳ ದೊಡ್ಡ ಪಾಲನ್ನು ರಷ್ಯಾ ಪೂರೈಸುತ್ತಿದೆ. ಭಾರತ-ರಷ್ಯಾ ಸ್ನೇಹದ ಬಗ್ಗೆ, ಮಿಲಿಟರಿ ಸಹಕಾರದ ಬಗ್ಗೆ ಅಮೆರಿಕ ಕೆಂಗಣ್ಣು ಬೀರಿದ್ದರೂ, ಭಾರತ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ವ್ಯಾಪಾರ
* ಕಳೆದ ವರ್ಷ ಭಾರತ-ರಷ್ಯಾ ವ್ಯಾಪಾರ 8 ಬಿಲಿಯನ್ ಡಾಲರ್ಗಳಷ್ಟಿತ್ತು.
ಭಾರತ-ಯೂಕ್ರೇನ್ ಸಂಬಂಧ
ಕಳೆದ ವರ್ಷ ಭಾರತ-ಯೂಕ್ರೇನ್ ನಡುವಿನ ವಹಿವಾಟು 2.7 ಬಿಲಿಯನ್ ಡಾಲರ್ಗಳಷ್ಟಿತ್ತು. ಕಳೆದವರ್ಷ ಯೂಕ್ರೇನ್ನಿಂದ ಭಾರತ 1.7 ಮಿಲಿಯನ್ ಟನ್ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಂಡಿದೆ. ಯೂಕ್ರೇನ್ನಿಂದ ಟೈಲ್ಸ್ಗಳು ಗುಜರಾತ್ ಮತ್ತು ರಾಜಸ್ಥಾನಕ್ಕೆ ರ್ತಾಗುತ್ತಿವೆ.
ರಷ್ಯಾ ಮೇಲೆ ಯಾವೆಲ್ಲ ನಿರ್ಬಂಧ?
* ತಂತ್ರಜ್ಞಾನ ಹಂಚಿಕೆ
* ಯುರೋಪ್ ಮತ್ತು ಅಮೆರಿಕದ ಬ್ಯಾಂಕುಗಳು ರಷ್ಯಾದೊಂದಿಗಿನ ಒಪ್ಪಂದಗಳನ್ನು ಮುರಿದುಕೊಂಡಿವೆ.
* ಯುರೋಪ್ ಬ್ಯಾಂಕುಗಳಲ್ಲಿನ ರಷ್ಯಾ ಸ್ವತ್ತು ಮುಟ್ಟುಗೋಲು
* ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಷ್ಯಾ ಉತ್ಪನ್ನ ನಿಷೇಧ
* ಜಾಗತಿಕ ಇಂಟರ್ಬ್ಯಾಂಕ್ ಪಾವತಿ ವ್ಯವಸ್ಥೆ (ಸ್ವ್ಟಿ್)ಯಿಂದ ರಷ್ಯಾ ಹೊರಕ್ಕೆ
* ಅಮೆರಿಕ ಮತ್ತು ಯುರೋಪ್ಗೆ ರಷ್ಯಾದ ರಾಜಕೀಯ ಮುಖಂಡರು ಭೇಟಿ ನೀಡುವಂತಿಲ್ಲ.
ಹೀಗಿದೆ ಯೂಕ್ರೇನ್
ವ್ಯಾಪಾರದಲ್ಲಿ ಯೂಕ್ರೇನ್ ಗರಿಷ್ಠ ವ್ಯಾಪಾರ ಸಂಬಂಧ ಹೊಂದಿರುವುದೇ ರಷ್ಯಾದೊಂದಿಗೆ. ಶೇಕಡ 25.7 ರ್ತು ಮತ್ತು ಶೇ.32.4 ಆಮದನ್ನು ಹೊಂದಿದೆ. ಇದಲ್ಲದೆ, ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳೊಂದಿಗೆ ಅದು ವ್ಯಾಪಾರ ಸಂಬಂಧ ಹೊಂದಿದೆ. ಆಹಾರ ಮತ್ತು ಕೃಷಿ ಉತ್ಪನ್ನಗಳು, ಟೈಲ್ಸ್ಗಳನ್ನು ಯೂಕ್ರೇನ್ ರ್ತು ಮಾಡುತ್ತದೆ.
ಕೈಗಾರಿಕೆಗಳು
ಉದ್ಯಮ ವಲಯದ 20ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಯೂಕ್ರೇನ್ನಲ್ಲಿವೆ. ಇಂಧನ, ವಿದ್ಯುತ್ ತಯಾರಿಕೆ, ನೈಸಗಿರ್ಕ ಅನಿಲ, ಯಂತ್ರ ತಯಾರಿಕೆ, ಕಟ್ಟಡ ಸಾಮಗ್ರಿ ಹಾಗೂ ಹಡಗು ತಯಾರಿಕೆಯ ಕೈಗಾರಿಕೆಗಳು ಕಾರ್ಯನಿರತವಾಗಿವೆ.