ರಾಣೆಬೆನ್ನೂರ: ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಬಳಿ ರಸ್ತೆ ನಿರ್ಮಾಣಕ್ಕಾಗಿ ಮರ ಕಡಿಯುವ ಕಾಮಗಾರಿ ಇರುವುದರಿಂದ ಸೆ. 19ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ತಿಮ್ಮೆನಹಳ್ಳಿ, ಸಣ್ಣಸಂಗಾಪುರ, ಮಾಳನಾಯಕನಹಳ್ಳಿ, ಬಡಬಸಾಪುರ, ಪತ್ತೇಪುರ ಮತ್ತು ಕೂಸಗಟ್ಟಿ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.