

Rural India : ಕಳೆದ ಎರಡು ದಶಕಗಳಲ್ಲಿ ಭಾರತದ ಗ್ರಾಮೀಣ ಭಾಗ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ. ಆರ್ಥಿಕ ಬೆಳವಣಿಗೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಒಂದು ಕಾಲದಲ್ಲಿ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದ್ದು, ವಿವಿಧ ವಲಯಗಳಿಂದ ಗ್ರಾಮೀಣ ಭಾರತದಲ್ಲಿ ಆದಾಯದ ಮೂಲವೂ ಹೆಚ್ಚಾಗಿದೆ. ಕೃಷಿ ಈಗಲೂ ಗ್ರಾಮೀಣ ಜನರ ಆದಾಯಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತಿದ್ದರು ಕೂಡ ನಿರ್ಮಾಣ, ವ್ಯಾಪಾರ ಮತ್ತು ಇನ್ನಿತರ ಸೇವೆಗಳ ಹೆಚ್ಚಳದಿಂದ ಗ್ರಾಮೀಣ ಪ್ರದೇಶದ ನೋಟವೇ ಸಂಪೂರ್ಣ ಬದಲಾಗಿದೆ. ಬೆಳವಣಿಗೆಗೆ ಹೊಸ ಹೊಸ ಮಾರ್ಗಗಳು ಇದೀಗ ಸೃಷ್ಟಿಯಾಗಿವೆ.
| ಪ್ರಶಾಂತ್ ಸಿ, ಎಎಂಎಫ್, ನೋಂದಾಯಿತ ಮ್ಯೂಚುವಲ್ ಫಂಡ್ ವಿತರಕರು
ಉತ್ತಮವಾದ ರಸ್ತೆಗಳು, ವಿದ್ಯುತ್ ಮತ್ತು ಡಿಜಿಟಲ್ ಸಂಪರ್ಕದಂತಹ ಮೂಲಸೌಕರ್ಯಗಳ ವಿಸ್ತರಣೆಯಿಂದಾಗಿ ಗ್ರಾಮೀಣ ಭಾಗವನ್ನು ನಗರ ಪ್ರದೇಶದ ಮಾರುಕಟ್ಟೆಗಳಿಗೆ ಹತ್ತಿರ ತಂದಿದೆ. ಇದರಿಂದ ವ್ಯವಹಾರಗಳಿಗೆ ದೊಡ್ಡ ಬಾಗಿಲು ತೆರೆದುಕೊಂಡಂತಾಗಿದೆ. ಗ್ರಾಮೀಣ ಭಾರತದ ಜನರಲ್ಲಿ ಹೆಚ್ಚುತ್ತಿರುವ ಬಳಕೆಯ ಶಕ್ತಿಯಿಂದ ವಿವಿಧ ವಲಯಗಳಲ್ಲಿನ ಕಂಪನಿಗಳು ಪ್ರಯೋಜನ ಪಡೆಯುತ್ತಿವೆ. ಗ್ರಾಮೀಣ ಭಾಗದ ಜನರ ತಲಾ ಆದಾಯವು ಸ್ಥಿರವಾಗಿ 2000 ಡಾಲರ್ ಗಡಿಯನ್ನು ಮೀರಿರುವುದನ್ನು ನೋಡಿದರೆ ಇಲ್ಲಿನ ಜನರ ಬಳಕೆಯ ಶಕ್ತಿಯು ನಗರ ಪ್ರದೇಶದ ಜನರ ಟ್ರೆಂಡ್ಗಳನ್ನು ತೋರಿಸುತ್ತದೆ. ಹೀಗಾಗಿ ಆಟೋಮೊಬೈಲ್‌ಗಳು, ಬಾಳಿಕೆ ಬರುವ ವಸ್ತುಗಳು, ಎಫ್ಎಂಸಿಜಿ ( ವೇಗವಾಗಿ ಮಾರಾಟವಾಗುವ ಗ್ರಾಹಕ ಸರಕುಗಳು ) ಮತ್ತು ಡಿಜಿಟಲ್ ಸೇವೆಗಳಿಗೆ ಗ್ರಾಮೀಣ ಭಾಗದಲ್ಲಿ ಬೇಡಿಕೆ ಹೆಚ್ಚುತ್ತಿವೆ. ಜನರ ಬಳಕೆಯ ಶಕ್ತಿ ಹೆಚ್ಚಾಗಲು ಕೇವಲ ಹೆಚ್ಚಿನ ಆದಾಯದ ಪರಿಣಾಮ ಮಾತ್ರವಲ್ಲ, ಸಾಲ ಮತ್ತು ಹಣಕಾಸು ಸೌಲಭ್ಯವು ಗ್ರಾಮೀಣ ಭಾರತದಲ್ಲಿ ಸುಲಭವಾಗಿ ಸಿಗುತ್ತಿದೆ.
ಗ್ರಾಮೀಣ ಭಾಗದ ಆದಾಯ ಮೂಲಗಳ ಹೆಚ್ಚಳದಿಂದಾಗಿ ಜನರಲ್ಲಿ ಬಳಕೆ ಅಥವಾ ಖರೀದಿಸುವ ಶಕ್ತಿಯು ಕೂಡ ಹೆಚ್ಚಾಗಿದೆ. ವಿವಿಧ ಕಂಪನಿಗಳು ಇದರ ಲಾಭ ಪಡೆಯುತ್ತಿವೆ. ಸದ್ಯ ಭಾರತದ ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಒಟ್ಟು ದೇಶಿಯ ಉತ್ಪನ್ನ(GDP)ಕ್ಕೆ ಶೇ. 46% ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾರತವು ಆಕರ್ಷಕ ಹೂಡಿಕೆ ಅವಕಾಶವನ್ನು ಒದಗಿಸುತ್ತದೆ. ಮೂಲಸೌಕರ್ಯ, ಡಿಜಿಟಲ್ ಸೇವೆಗಳು ಮತ್ತು ಗ್ರಾಹಕ ಸರಕುಗಳನ್ನು ಪೂರೈಸುವ ಕೈಗಾರಿಕೆಗಳು ಈಗಾಗಲೇ ಇದರ ಪ್ರಯೋಜನಗಳನ್ನು ಪಡೆಯುತ್ತಿವೆ. ಡಿಜಿಟಲ್ ಇಂಡಿಯಾ, ಜಲ ಜೀವನ್ ಮಿಷನ್, ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಂತಹ ಸರ್ಕಾರಿ ಉಪಕ್ರಮಗಳು ಆರ್ಥಿಕತೆಗೆ ಉತ್ತೇಜನ ನೀಡುತ್ತಿದ್ದು, ಗ್ರಾಮೀಣ ಭಾರತವು ಆರ್ಥಿಕ ಚಟುವಟಿಕೆಗೆ ಒಂದು ಪ್ರಮುಖ ಕೇಂದ್ರವಾಗಲು ಸಜ್ಜಾಗಿದೆ.
ಇಲ್ಲಿಯವರೆಗೆ, ಹೆಚ್ಚಿನ ಹೂಡಿಕೆ ಪೋರ್ಟ್‌ಫೋಲಿಯೊಗಳು ನಗರ ಕೇಂದ್ರಿತವಾಗಿವೆ. ಆದರೆ, ಗ್ರಾಮೀಣ ಪ್ರದೇಶಗಳು ಮುಂದುವರಿದರೆ ಮಾತ್ರ ಭಾರತವು ಸುಸ್ಥಿರವಾಗಿ ಬೆಳೆಯಲು ಸಾಧ್ಯವಿಲ್ಲ ಎಂಬುದು ಅಷ್ಟೇ ಸತ್ಯ. ಆದ್ದರಿಂದ, ಗ್ರಾಮೀಣ ಭಾರತ ಬೆಳವಣಿಗೆಯ ಸಾಮರ್ಥ್ಯವನ್ನು ಚೆನ್ನಾಗಿ ಬಳಸಿಕೊಳ್ಳುವ ಹೂಡಿಕೆ ಪೋರ್ಟ್‌ಫೋಲಿಯೊ ಈ ಸಮಯದದಲ್ಲಿ ಅಗತ್ಯವಾಗಿದೆ. ಹೀಗಾಗಿ ಈ ಬದಲಾವಣೆಯನ್ನು ಗುರುತಿಸಿ ಕಾರ್ಯನಿರ್ವಹಿಸುವ ಹೂಡಿಕೆದಾರರು, ಬೆಳೆಯುತ್ತಿರುವ ಗ್ರಾಮೀಣ ಮಾರುಕಟ್ಟೆಯನ್ನು ಬಂಡವಾಳ ಮಾಡಿಕೊಳ್ಳಲು ಉತ್ತಮ ಸ್ಥಾನದಲ್ಲಿರುತ್ತಾರೆ. ವೇಗವಾಗಿ ಬದಲಾಗುತ್ತಿರುವ ಗ್ರಾಮೀಣ ಭಾಗದ ಥೀಮ್ ಅನ್ನು ಅನುಸರಿಸುವ ಮ್ಯೂಚುವಲ್ ಫಂಡ್ ಯೋಜನೆಗಳನ್ನು ಹೂಡಿಕೆದಾರರು ಈ ಸಂದರ್ಭದಲ್ಲಿ ಪರಿಗಣಿಸಬಹುದು. ಬಹುಶಃ, ಇದು ಮುಂಬರುವ ವರ್ಷಗಳಲ್ಲಿ ಆಕರ್ಷಕ ಮತ್ತು ಸಂಪತ್ತನ್ನು ಸೃಷ್ಟಿಸುವ ಉತ್ತಮ ಹೂಡಿಕೆ ಅವಕಾಶವನ್ನು ನೀಡುತ್ತದೆ.
ಅಂತಹ ಒಂದು ಕೊಡುಗೆಯೆಂದರೆ ಐಸಿಐಸಿಐ ಪ್ರುಡೆನ್ಶಿಯಲ್ ರೂರಲ್ ಆಪರ್ಚುನಿಟೀಸ್ ಫಂಡ್, ಇದು ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುವಲ್ ಫಂಡ್‌ನಿಂದ ಹೊಸದಾಗಿ ಪ್ರಾರಂಭಿಸಲಾದ ಪ್ಲಾನ್ ಆಗಿದೆ. ಈ ಮುಕ್ತ ಇಕ್ವಿಟಿ ಯೋಜನೆಯು ಪ್ರಾಥಮಿಕವಾಗಿ ಗ್ರಾಮೀಣ ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಕೇಂದ್ರೀಕರಿಸುವ ಮತ್ತು ಅದರಿಂದ ಲಾಭ ಪಡೆಯುವ ವಲಯಗಳು ಮತ್ತು ಕಂಪನಿಗಳಲ್ಲಿ ಹೂಡಿಕೆ ಮಾಡುತ್ತದೆ. ಈ ನ್ಯೂ ಫಂಡ್ ಆಫರ್ (NFO) 2025ರ ಜನವರಿ 9 ರಿಂದ ಜನವರಿ 23 ರವರೆಗೆ ಲಭ್ಯವಿರುತ್ತದೆ.