ಗ್ರಾಮೀಣ ಕೃಪಾಂಕ ಹಲವರಿಗೆ ವರದಾನ

sgr bangarappa
ಬಂಗಾರಪ್ಪ ಜನ್ಮದಿನದ ಅಂಗವಾಗಿ ಸಾಗರದ ತಾಯಿ-ಮಗು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಲಾಯಿತು. ಗೋಪಾಲಕೃಷ್ಣ ಬೇಳೂರು, ಚಂದ್ರಪ್ಪ, ಗಣಪತಿ, ಮಧುಮಾಲತಿ, ಸರಸ್ವತಿ ಇತರರಿದ್ದರು.
Published on

ಸಾಗರ: ರಾಜ್ಯ ರಾಜಕಾರಣದಲ್ಲಿ ಬಡವರ ಬಂಧು ಎಂದರೆ ಅದು ಎಸ್.ಬಂಗಾರಪ್ಪ ಮಾತ್ರ. ಅಧಿಕಾರ ಅವಧಿಯಲ್ಲಿ ಬಡವರ ಪರವಾಗಿ ಅವರು ಜಾರಿಗೆ ತಂದಷ್ಟು ಜನಪ್ರಿಯ ಯೋಜನೆಗಳನ್ನು ಬೇರ‌್ಯಾರೂ ತಂದಿರಲಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಬಂಗಾರಪ್ಪ ಜನ್ಮದಿನದ ಅಂಗವಾಗಿ ಸಾಗರದ ತಾಯಿ-ಮಗು ಆಸ್ಪತ್ರೆಯಲ್ಲಿ ಭಾನುವಾರ ಬ್ಲಾಕ್ ಕಾಂಗ್ರೆಸ್ ಹಾಗೂ ಅಭಿಮಾನಿಗಳಿಂದ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿ ಮಾತನಾಡಿದರು.

ಅವರು ಸಿಎಂ ಆಗಿದ್ದಾಗ ಜಾರಿಗೆ ತಂದ ಆಶ್ರಯ, ಅಕ್ಷಯ, ಆರಾಧನಾ ಯೋಜನೆಗಳು ಸ್ಮರಣೀಯ. ಗ್ರಾಮೀಣ ಕೃಪಾಂಕ ಜಾರಿಗೆ ತರುವ ಮೂಲಕ ಗ್ರಾಮೀಣ ಪ್ರದೇಶದ ಯುವಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಬಂಗಾರಪ್ಪ ಅವರ ಕೊಡುಗೆ ಅಪಾರ. ಬಂಗಾರಪ್ಪ ಅವರು ಶಾಸಕರನ್ನು ತಯಾರಿಸುವ ಕಾರ್ಖಾನೆಯಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಅನೇಕ ಯುವ ಮುಖಂಡರು ಶಾಸಕರಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ ಎಂದರು.

ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಅವರು ವಿಶೇಷ ಒತ್ತು ನೀಡಿದ್ದರು. ಶಾಲಾ ಮಕ್ಕಳಿಗೆ ಪ್ರತಿದಿನ 1 ರೂ. ಪ್ರೋತ್ಸಾಹಧನ ನೀಡಿ ಶಿಕ್ಷಣದ ಆಸಕ್ತಿ ಹೆಚ್ಚಿಸುವ ಕೆಲಸ ಮಾಡಿದ್ದರು. ಅವರು ಹಲವರಿಗೆ ಗುರುಗಳು ಮಾತ್ರವಲ್ಲ, ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಪ್ರಮುಖರಾದ ಮಂಡಗಳಲೆ ಗಣಪತಿ, ಮಧುಮಾಲತಿ, ಸರಸ್ವತಿ, ಎಲ್.ಚಂದ್ರಪ್ಪ, ಸೋಮಶೇಖರ, ರವಿಕುಮಾರ್, ಲಲಿತಮ್ಮ, ಸುರೇಶಬಾಬು, ಉಷಾ, ಗಿರೀಶ್ ಕೋವಿ, ಮಹಾಬಲ ಕೌತಿ, ವಿಲ್ಸನ್, ರವೀಂದ್ರ, ಡಿ.ದಿನೇಶ್, ಅನ್ವರ್ ಬಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net