ಗ್ರಾಮೀಣ ಕ್ರೀಡಾಕೂಟ ಸ್ಥಳೀಯರಿಗೆ ವೇದಿಕೆ

kabaddi (1)
ಸೊರಬ ತಾಲೂಕಿನ ಕಡೇ ಜೋಳದ ಗುಡ್ಡೆಯಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ತಾಪಂ ಮಾಜಿ ಅಧ್ಯಕ್ಷ ಗಣಪತಿ, ತಬಲಿ ಬಂಗಾರಪ್ಪ, ಎಚ್.ಇ.ಜ್ಞಾನೇಶ್, ಕಾಮಪ್ಪ, ಮಾರ್ಯಪ್ಪ ಮತ್ತಿತರರು ಉದ್ಘಾಟಿಸಿದರು.
Published on

ಸೊರಬ: ನಶಿಸುತ್ತಿರುವ ಕ್ರೀಡೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವಕರು ಮುಂದಾಗುತ್ತಿರುವುದು ಶ್ಲಾಘನೀಯ ಎಂದು ತಾಪಂ ಮಾಜಿ ಅಧ್ಯಕ್ಷ ಗಣಪತಿ ಎಚ್. ಹುಲ್ತಿಕೊಪ್ಪ ಹೇಳಿದರು.

ತಾಲೂಕಿನ ಕಡೇ ಜೋಳದ ಗುಡ್ಡೆಯಲ್ಲಿ ಶನಿವಾರ ಶ್ರೀ ನಾಗಚೌಡೇಶ್ವರಿ ಗೆಳೆಯರ ಬಳಗದಿಂದ ಆಯೋಜಿಸಿದ್ದ 4ನೇ ವರ್ಷದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳುವುದರಿಂದ ಸ್ಥಳೀಯರಿಗೆ ಪ್ರತಿಭೆ ಅನಾವರಣಕ್ಕೆ ಅವಕಾಶವಾಗುತ್ತದೆ. ಇಂತಹ ಕ್ರೀಡಾಕೂಟಗಳು ಹೆಚ್ಚು ನಡೆಯಬೇಕು. ಈ ಭಾಗದ ರೈತರಿಗೆ ಅನುಕೂಲವಾಗುವಂತೆ ವರದಾ ನದಿಗೆ ಬ್ಯಾರೇಜ್ ನಿರ್ಮಾಣ ಮಾಡಲಾಗುತ್ತಿದೆ. ಯುವಕರು ದುರಭ್ಯಾಸಗಳನ್ನು ರೂಢಿಸಿಕೊಳ್ಳದೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ನೀಡಬೇಕು. ಕ್ರೀಡಾ ಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದಂತ ವೈದ್ಯ ಎಚ್.ಇ.ಜ್ಞಾನೇಶ್ ಮಾತನಾಡಿ, ಆಧುನಿಕ ತಂತ್ರಜ್ಞಾನ ಪ್ರಭಾವದಿಂದ ಗ್ರಾಮೀಣ ನೈಜ ಸಂಸ್ಕೃತಿ ಮರೆಯಾಗುತ್ತಿದೆ. ಕೆಲವು ಗ್ರಾಮಗಳು ತಮ್ಮ ಮೂಲ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿವೆ. ಗ್ರಾಮೀಣ ಕ್ರೀಡೆಗಳು ಉಳಿಯಬೇಕು. ಅವುಗಳನ್ನು ಬೆಳೆಸಬೇಕು ಎಂದರು.

ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ ಮಾತನಾಡಿ, ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಸದೃಢರಾಗಲು ಸಾಧ್ಯ. ಕಬಡ್ಡಿ ಕ್ರೀಡೆ ಮೊದಲು ಗ್ರಾಮೀಣ ಕ್ರೀಡೆಯಾಗಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ ಎಂದು ಹೇಳಿದರು.

ಗ್ರಾಮ ಸಮಿತಿ ಅಧ್ಯಕ್ಷ ಕಾಮಪ್ಪ, ಬೆನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಮಾರ್ಯಪ್ಪ, ನಾರಾಯಣಪ್ಪ, ಎಂ.ಪಿ.ರತ್ನಾಕರ, ಉಮಾಕಾಂತ್, ಪರಶುರಾಮಪ್ಪ, ರಾಜಪ್ಪ, ರಾಮಚಂದ್ರಪ್ಪ, ಹುಲಿಯಪ್ಪ, ತಿಮ್ಮಪ್ಪ, ಕನ್ನಪ್ಪ, ಪುಟ್ಟಪ್ಪ, ಬಿಳಿಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net