

ಬೆಂಗಳೂರು: ಲೆಕ್ಕಪತ್ರ ಇಲಾಖೆಯಿಂದ ನಿಯೋಜನೆ ಮೇರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (Rural Devolopment)ಇಲಾಖೆಗೆ ನಿಯುಕ್ತಿಗೊಳಿಸುವ ನೌಕರರುಗಳು ಕಡ್ಡಾಯವಾಗಿ ಮರುಸ್ಥಳ ನಿಯುಕ್ತಿ ಆದೇಶ ಪಡೆಯಲು ಸೂಚನೆ ನೀಡಲಾಗಿದೆ.
ಚಾಲನಾ ಆದೇಶ ಪಡೆದ ನಂತರವೇ ನೌಕರರನ್ನು ಸ್ಥಳ ನಿಯುಕ್ತಿಗೊಳಿಸಿದ ಹುದ್ದೆಗಳಿಗೆ ವರದಿ ಮಾಡಿಸಿಕೊಳ್ಳುವಂತೆ ಅಪರ ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ.
ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನೆ ಇಲಾಖೆ ತಮ್ಮ ನೌಕರರುಗಳನ್ನು (ಲೆಕ್ಕಾಧೀಕ್ಷಕರು, ಪ್ರಥಮ ದರ್ಜೆ ಲೆಕ್ಕಸಹಾಯಕರು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಧೀನ ಕಚೇರಿಗಳಿಗೆ ನೇರವಾಗಿ ನಿಯೋಜಿಸಲಾಗುತ್ತಿದೆ.
ಕೆಲವು ಅಧಿಕಾರಿ/ನೌಕರರುಗಳ ಕಾರ್ಯವೈಖರಿ ತೃಪ್ತಿಕರವಾಗಿಲ್ಲದ ಕಾರಣ ದೂರುಗಳ ಹಿನ್ನಲೆಯಲ್ಲಿ ಅವರುಗಳ ಸೇವೆಯನ್ನು ಮಾತೃ ಇಲಾಖೆಯಾದ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಗೆ ಹಿಂದಿರುಗಿಸಿದ್ದರೂ ಸಹ ಸದರಿಯವರನ್ನು ಪುನಃ ಗ್ರಾಮೀಣಾಭಿವೃದ್ಧಿ ಮತ್ತು. ಪಂಚಾಯತ್ ರಾಜ್ ಇಲಾಖೆಗೆ ನೇರವಾಗಿ ನಿಯೋಜಿಸಲಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ.
ಆದ್ದರಿಂದ ಸಿಬ್ಬಂದಿಗಳನ್ನು ನೇರವಾಗಿ ನಿಯೋಜಿಸದೇ ಸದರಿಯವರುಗಳ ಸೇವೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಶಕ್ಕೆ ನೀಡುವಂತೆ ಹಾಗೂ ಈ ರೀತಿ ನಿಯೋಜನೆಗೊಳ್ಳುವ ನೌಕರರುಗಳು ಕಡ್ಡಾಯವಾಗಿ ಗ್ರಾಮೀಣಾಭಿವೃದ್ಧಿ
ಮತ್ತು ಪಂಚಾಯತ್ ರಾಜ್ ಇಲಾಖೆಯ ಅನುನೋದನೆ ಪಡೆದು ಇಲಾಖೆಯಿಂದ ಮರುಸ್ಥಳ ನಿಯುಕ್ತಿ ಆದೇಶ ಪಡಯಬೇಕು. ಈ ಸೂಚನೆ ಪಾಲಿಸದೇ ರಾಜ್ಯ ಲೆಕ್ಕಪರಿಶೋಧನೆ ಮತ್ತು ಇಲಾಖೆಯ ನೌಕರರುಗಳನ್ನು ನೇರವಾಗಿ ವರದಿ ಮಾಡಿಸಿಕೊಂಡಲ್ಲಿ/ ಹಾಜರುಪಡಿಸಿಕೊಂಡಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.