ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್​ ಎದುರು ರೂಪಾಯಿ ಮೌಲ್ಯ ಏರಿಕೆ | Rupee

Bbau (43)
Published on

ಮುಂಬೈ: ವಿದೇಶಿ ನಿಧಿಯ ಒಳಹರಿವು ಮತ್ತು ಕಚ್ಚಾ ತೈಲ ಬೆಲೆಗಳು ಕಡಿಮೆಯಾಗಿರುವುದರಿಂದ ಡಾಲರ್ ಎದುರು ರೂಪಾಯಿ(Rupee) ಮೌಲ್ಯ ಸೋಮವಾರ 9 ಪೈಸೆ ಏರಿಕೆಯಾಗಿ 87.93ಕ್ಕೆ ತಲುಪಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ಡಾಲರ್ ಎದುರು ರೂಪಾಯಿ 87.94 ಕ್ಕೆ ಪ್ರಾರಂಭವಾಯಿತು ಮತ್ತು ದಿನವಿಡೀ 87.74-87.94 ವ್ಯಾಪ್ತಿಯಲ್ಲಿ ವಹಿವಾಟು ನಡೆಸಿ, ನಂತರ 87.93 (ತಾತ್ಕಾಲಿಕ) ಕ್ಕೆ ಸ್ಥಿರವಾಯಿತು. ಹಿಂದಿನ ಮುಕ್ತಾಯಕ್ಕೆ ಹೋಲಿಸಿದರೆ 9 ಪೈಸೆ ಸೋಮವಾರ ಹೆಚ್ಚಾಗಿದೆ. ಹೋದ ವಾರಂತ್ಯದ ಶುಕ್ರವಾರ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ 88.02 ಕ್ಕೆ ಮುಕ್ತಾಯವಾಯಿತು.

ಇನ್ನು ಸೋಮವಾರ ದೇಶೀಯ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 411.18 ಅಂಕಗಳ ಏರಿಕೆ ಕಂಡು 84,363.37 ಕ್ಕೆ ತಲುಪಿದ್ದರೆ, ನಿಫ್ಟಿ 133.30 ಅಂಕಗಳ ಏರಿಕೆ ಕಂಡು 25,843.15 ಕ್ಕೆ ತಲುಪಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net