ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಇಂದು ಸಂಜೆ ಯಶವಂತಪುರ- ವಾಸ್ಕೊ ಮಧ್ಯೆ ಸಂಚರಿಸಲಿದೆ ವಿಶೇಷ ರೈಲು

t
Published on

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಯಶವಂತಪುರ ಮತ್ತು ವಾಸ್ಕೋ ಮಧ್ಯೆ ವಿಶೇಷ ರೈಲು ಸಂಚರಿಸಲಿದೆ. ರೈಲು ಓಡಾಟದ ಮಾಹಿತಿ ಇಲ್ಲಿದೆ ನೋಡಿ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ನೈಋತ್ಯ ರೈಲ್ವೆ ವಲಯದಿಂದ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಯಶವಂತಪುರ ಮತ್ತು ವಾಸ್ಕೊ ಮಧ್ಯೆ ವಿಶೇಷ ರೈಲು ಸಂಚಾರ ಮಾಡಲಿದೆ.


ಯಶವಂತಪುರ ಮತ್ತು ವಾಸ್ಕೊ ಮಧ್ಯೆ ವಿಶೇಷ ರೈಲು ಓಡಾಡಲಿದ್ದು, ಇಂದು (ಆಗಸ್ಟ್​​11) ಸಂಜೆ 6.15ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಡಲಿದೆ. ಮಾರನೇ ದಿನ ಬೆಳಗ್ಗೆ ರೈಲು 9.30ಕ್ಕೆ ವಾಸ್ಕೊ ತಲುಪಲಿದೆ. ಮರಳಿ ಆಗಸ್ಟ್ 12ರಂದು ಮಧ್ಯಾಹ್ನ 2.30ಕ್ಕೆ ವಾಸ್ಕೊದಿಂದ ಹೊರಡುತ್ತದೆ.
ಮಾರನೇ ದಿನ ಬೆಳಗಿನ ಜಾವ 4.30ಕ್ಕೆ ಯಶವಂತಪುರ ತಲುಪಲಿದೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಮನೆಗೆ ತೆರಳುವವರು, ಈ ರೈಲು ಬಳಸಬಹುದು.


ತುಮಕೂರು, ಅರಸಿಕೇರೆ, ಬಿರೂರ, ದಾವಣಗೆರೆ, ಎಸ್​ಎಂಎಂ ಹಾವೇರಿ, ಎಸ್​ಎಸ್​ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್​ರಾಕ್, ಕುಲೇಮ್ ಸವೊರ್ಡಮ್ ಮತ್ತು ಮಡಗಾಂವ ನಿಲ್ದಾಣಗಳಲ್ಲಿ ಈ ರೈಲಿಗೆ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net